
ಹೈದರಾಬಾದ್: ತಮ್ಮ ನಿವಾಸದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ನಟ ಮೋಹನ್ ಬಾಬು ಭಾನುವಾರ ಆಸ್ಪತ್ರೆಗೆ ತೆರಳಿ ಗಾಯಾಳು ಪತ್ರಕರ್ತನ ಕ್ಷಮೆ ಯಾಚಿಸಿದ್ದಾರೆ.
ಪತ್ರಕರ್ತ ರಂಜಿತ್ ಕುಮಾರ್ ಭೇಟಿಯಾದ ಅವರು ನಡೆದ ಘಟನೆ ದುರದೃಷ್ಟಕರ ಎಂದು ಕ್ಷಮೆ ಕೋರಿದ್ದಾರೆ. ಈ ಬಗ್ಗೆ ಮಾತನಾಡಿದ ರಂಜಿತ್ ಕುಮಾರ್, ನಟ ಮೋಹನ್ ಬಾಬು ಮತ್ತು ಅವರ ಹಿರಿಯ ಪುತ್ರ ವಿಷ್ಣು ನನ್ನ ಮೇಲಿನ ಹಲ್ಲೆಯನ್ನು ದುರದೃಷ್ಟಕರ ಎಂದು ತಿಳಿಸಿದ್ದಾರೆ. ನನಗೆ, ನನ್ನ ಪರಿವಾರ ಮತ್ತು ಎಲ್ಲಾ ಪತ್ರಕರ್ತರ ಬಳಿ ಕ್ಷಮೆ ಯಾಚಿಸಿದ್ದಾರೆ. ಅಲ್ಲದೇ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ನನ್ನ ಮನೆಗೆ ಬರುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.