ಇಂದು ಮುಂಜಾನೆ ಕೇರಳದ ಕೇಪ ಮಂಗಲಂ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಲಯಾಳಂ ಕಿರುತೆರೆ ನಟ 39 ವರ್ಷದ ಕೊಲ್ಲಂ ಸುಧಿ ವಿಧಿವಶರಾಗಿದ್ದಾರೆ.
ಕೊಲ್ಲಂ ಸುಧಿ ತಮ್ಮ ಇತರೆ ಮೂವರು ಸಹ ಕಲಾವಿದರೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸೋಮವಾರ ಮುಂಜಾನೆ 4-30 ರ ಸುಮಾರಿಗೆ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದವರ ತಲೆಗೆ ತೀವ್ರ ಪೆಟ್ಟಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊಲ್ಲಂ ಸುಧಿ ವಿಧಿವಶರಾಗಿದ್ದಾರೆ. ಇತರೆ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.
ಕಿರುತೆರೆಯಲ್ಲಿ ಹಾಸ್ಯ ಕಲಾವಿದರಾಗಿ ಖ್ಯಾತಿ ಗಳಿಸಿದ್ದ ಕೊಲ್ಲಂ ಸುಧಿ ಕೆಲವೊಂದು ಚಲನಚಿತ್ರಗಳಲ್ಲೂ ನಟಿಸಿದ್ದರು. ಕೊಲ್ಲಂ ಸುಧಿ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ.