![Emraan Hashmi expresses his desire to work in 'Jannat 3'](https://www.thenews.com.pk/assets/uploads/updates/2024-03-23/1171454_4098413_Emraan-Hashmi_updates.jpg)
ಬಾಲಿವುಡ್ ಚಿತ್ರರಂಗದಲ್ಲಿ ರೋಮ್ಯಾಂಟಿಕ್ ಚಿತ್ರಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ನಟ ಇಮ್ರಾನ್ ಇಂದು ತಮ್ಮ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 2003ರಲ್ಲಿ ತೆರೆ ಕಂಡ ವಿಕ್ರಂ ಭಟ್ ನಿರ್ದೇಶನದ ‘ಫುಟ್ ಬಾತ್’ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2004 ರಂದು ‘ಮರ್ಡರ್’ ಸಿನಿಮಾದಲ್ಲಿ ಅಭಿನಯಿಸಿದರು.
ನಟ ಇಮ್ರಾನ್ ಹಶ್ಮಿ ಕಳೆದ ವರ್ಷ ‘ಸೆಲ್ಫಿ’ ಮತ್ತು ‘ಟೈಗರ್ 3’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ‘OG’ ಎಂಬ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ನ ಹಲವರು ನಟ ನಟಿಯರು ಇಮ್ರಾನ್ ಹಶ್ಮಿ ಅವರಿಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.