ಬೆಂಗಳೂರು: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ನಟ ದುನಿಯಾ ವಿಜಯ್ ಅವರು ದಂಡ ಪಾವತಿಸಲಾಗದೆ ಸೆರೆವಾಸ ಅನುಭವಿಸುತ್ತಿದ್ದ ಆರು ಕೈದಿಗಳ ದಂಡದ ಮೊತ್ತವನ್ನು ಪಾವತಿಸಿ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.
ಇತ್ತೀಚೆಗೆ ತಮ್ಮ ಸ್ವಂತ ಊರಾದ ಕುಂಬಾರಹಳ್ಳಿಗೆ ಭೇಟಿ ನೀಡಿದ್ದ ಅವರಿಗೆ ತಮ್ಮ ಊರಿನ ಮಹಿಳೆ ಸೇರಿ ಆರು ಮಂದಿ ಕೈದಿಗಳು ದಂಡ ಪಾವತಿಸಲಾಗದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಗೊತ್ತಾಗಿದೆ.
ಆರು ಮಂದಿಗೆ ಕೋರ್ಟ್ ವಿಧಿಸಿರುವ ದಂಡ ಪಾವತಿಸಿ ಅವರ ಬಿಡುಗಡೆಗೆ ದುನಿಯಾ ವಿಜಯ್ ಸಹಕರಿಸಿದ್ದು, ಆರು ಮಂದಿ ಕೈದಿಗಳು ಬಂಧಮುಕ್ತರಾಗಿದ್ದಾರೆ. ವಿಜಯ್ ಅವರ ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮವಾಗಿ ಜೀವನ ನಡೆಸಿ ಎಂದು ಬಿಡುಗಡೆಯಾದವರಿಗೆ ದುನಿಯಾ ವಿಜಯ್ ಹಾರೈಸಿದ್ದಾರೆ. ಈ ಹಿಂದೆ ಅವರು ಮೈಸೂರಿನ ಕಾರಾಗೃಹದಲ್ಲಿದ್ದ ಕೈದಿಗಳಿಗೆ ದಂಡ ಪಾವತಿಸಿ ಬಿಡುಗಡೆಗೆ ಸಹಾಯ ಮಾಡಿದ್ದರು.