ಬೆಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಟ ಸೇರಿದಂತೆ ಕೇರಳದ ಮೂವರು ಪೆಡ್ಲರ್ ಗಳನ್ನು ಹೆಚ್.ಎಸ್.ಆರ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಲಯಾಳಂ ಕಿರುತೆರೆ ನಟ ಶಿಯಾಜ್ ಆತನ ಸಹಚರರಾದ ಮೊಹಮ್ಮದ್ ಶಾಹಿದ್ ಮತ್ತು ಮಂಗಲ್ ತೋಡಿ ಜಿತಿನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 11.50 ಲಕ್ಷ ರೂ ಮೌಲ್ಯದ 191 ಗ್ರಾಂ ಎಂಡಿಎಂಎ ಮಾದಕ ವಸ್ತು, 1.50 ಲಕ್ಷ ರೂ ಮೌಲ್ಯದ 2.80 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.
ಕೇರಳದ ಡ್ರಗ್ ಪೆಡ್ಲರ್ ಗಳಿಂದ ಕಡಿಮೆ ದರಕ್ಕೆ ಮಾದಕ ವಸ್ತು ಖರೀದಿಸಿ ಬೆಂಗಳೂರಿಗೆ ತಂದು ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನುವುದು ವಿಚಾರಣೆಯಲ್ಲಿ ಗೊತ್ತಾಗಿದ್ದು, ತನಿಖೆ ಮುಂದುವರೆಸಲಾಗಿದೆ.