
ಡಾಲಿ ಧನಂಜಯ್ ಅಭಿನಯದ ‘ಹೆಡ್ ಬುಷ್’ ಚಿತ್ರ ಈಗಾಗಲೇ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಇದರ ಮಧ್ಯೆ ಚಿತ್ರದ ದೃಶ್ಯ ಒಂದರ ಕುರಿತು ಆಕ್ಷೇಪಗಳು ಕೇಳಿ ಬರುತ್ತಿದ್ದು, ಅದನ್ನು ಕಟ್ ಮಾಡಬೇಕು ಹಾಗೂ ನಿರ್ಮಾಪಕ, ನಿರ್ದೇಶಕ, ಕಲಾವಿದರು ಕ್ಷಮೆ ಕೇಳಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.
ಸಾಹಸ ದೃಶ್ಯ ಒಂದರಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಲಾಗಿದೆ. ವೀರಗಾಸೆ ಕಲಾವಿದರಿಗೆ ಒದೆಯುವ ದೃಶ್ಯ ಇರುವುದರಿಂದ ಇದು ಕಲೆ ಮತ್ತು ವೀರಭದ್ರ ದೇವರಿಗೆ ಮಾಡಿದ ಅವಮಾನ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗುತ್ತಿದೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಡಾಲಿ ಧನಂಜಯ್, ತಾವು ವೀರಭದ್ರ ದೇವರ ಆರಾಧಕರಾಗಿದ್ದು, ಚಿತ್ರದಲ್ಲಿ ವೀರಗಾಸೆಗೆ ಯಾವುದೇ ಅವಮಾನ ಮಾಡಲಾಗಿಲ್ಲ. ಜಯರಾಜ್ ಕೊಲ್ಲಲು ಬರುವ ಆರೋಪಿಗಳು ವೀರಗಾಸೆ ಉಡುಪು ಧರಿಸಿರುವುದಿಲ್ಲ. ಅವರು ಶೂ ಹಾಕಿಕೊಂಡಿರುತ್ತಾರೆ. ಹಾಗಾಗಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬುದು ತಪ್ಪು ಕಲ್ಪನೆ ಎಂದಿದ್ದಾರೆ.