ಬೆಂಗಳೂರು : ನಟ ಡಾಲಿ ಧನಂಜಯ್ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮದುವೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.
ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ಜೋಡಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮದುವೆಯ ಮಮತೆಯ ಕರೆಯೋಲೆ ನೀಡಿದ್ದಾರೆ. ನಟ ಡಾಲಿ ಧನಂಜಯ್ ಹಾಗೂ ವೈದ್ಯೆ ಧನ್ಯತಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಫೆಬ್ರವರಿಯಲ್ಲಿ ಹಸೆಮಣೆಯೇರಲಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು. ಹೊಸ ಬದುಕಿಗೆ ಮುಂದಡಿಯಿಡುತ್ತಿರುವ ಜೋಡಿಗೆ ಶುಭ ಹಾರೈಸಿದೆ ಎಂದು ಸಿಎಂ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ತಮ್ಮ ಮದುವೆಯ ಕರೆಯೋಲೆ ನೀಡಿ, ಆಹ್ವಾನಿಸಿದರು.
ಹೊಸ ಬದುಕಿಗೆ ಮುಂದಡಿಯಿಡುತ್ತಿರುವ ಜೋಡಿಗೆ ಶುಭ ಹಾರೈಸಿದೆ. pic.twitter.com/6rwt8BW9e2— Siddaramaiah (@siddaramaiah) December 15, 2024