
ಮೈಸೂರು: ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ವೈದ್ಯೆಯೊಂದಿಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರಮನೆ ನಗರಿ ಮೈಸೂರಿನಲ್ಲಿ ನಟ ಧನಂಜಯ್ ಹಾಗೂ ಡಾಕ್ಟರ್ ಧನ್ಯತಾ ವಿವಾಹ ನೆರವೇರಿದೆ.
ಮೈಸೂರಿನ ವಸ್ತುಪ್ರದರ್ಶನ ಮೈದಾನದಲ್ಲಿ ವೈಭವಯುತವಾಗಿ ನಟ ಡಾಲಿ ಧನಂಜಯ್ ಹಾಗೂ ಡಾ.ಧನ್ಯತಾ ಸಪ್ತಪದಿ ತುಳಿದಿದ್ದಾರೆ. ಈಗಾಗಲೇ ಮಾಂಗಲ್ಯ ಧಾರಣೆ ನೆರವೇರಿದ್ದು, ಧನಂಜಯ್ ಹಾಗೂ ಧನ್ಯತಾ ಅವರ ಕುಟುಂಬದವರು, ಸಂಬಂಧಿಕರು ಸಾವಿರಾರು ಅಭಿಮಾನಿಗಳು ವಿವಾಹ ಸಂಭ್ರಮಕ್ಕೆ ಸಾಕ್ಷಿಯಾದರು.
ಅರಸಿಕೆರೆ ಕಾಳೇನಹಳ್ಳಿ ಮೂಲದ ನಟ ಧನಂಜಯ್, ಚಿತ್ರದುರ್ಗ ಜಿಲ್ಲೆಯ ಶಿವಪುರ ಮೂಲದ ವೈದ್ಯೆ ಧನ್ಯತಾ ಅವರನ್ನು ವರಿಸಿದ್ದಾರೆ. ಕಳೆದ ಎರಡು ದಿನಗಳಿಂದ ನಟ ಧನಂಜಯ್ ಹಾಗೂ ಧನ್ಯತಾ ವಿವಾಹ ಸಂಭ್ರಮ ಅದ್ಧೂರಿಯಾಗಿ ನಡೆದಿದೆ.