2003ರಲ್ಲಿ ಬಿಡುಗಡೆಯಾಗಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ನಮ್ಮ ಪ್ರೀತಿಯ ರಾಮು’ ಚಿತ್ರ ಇದೇ ಫೆಬ್ರವರಿ 14ರಂದು ಮರು ಬಿಡುಗಡೆಯಾಗುತ್ತಿದೆ.
ಇನ್ನು ಕಳೆದ ವರ್ಷ ಬಿಡುಗಡೆಗೊಂಡ ನಟ ದರ್ಶನ್ ಅವರ ಕಾಟೇರ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿತ್ತು. 2024ರಲ್ಲಿ ಕರಿಯ, ಶಾಸ್ತ್ರಿ ಮತ್ತು ನವಗ್ರಹದಂತಹ ಸಿನಿಮಾನಗಳನ್ನು ಕೂಡ ರೀ ರಿಲೀಸ್ ಮಾಡಲಾಯಿತು. ನಮ್ಮ ಪ್ರೀತಿಯ ರಾಮು ಚಿತ್ರವು ದರ್ಶನ್ ಅವರ ವೃತ್ತಿಜೀವನದಲ್ಲಿ ಅದ್ವಿತೀಯ ಚಿತ್ರಗಳಲ್ಲಿ ಒಂದಾಗಿದ್ದು, ಚಿತ್ರದಲ್ಲಿ ನಟ ದೃಷ್ಟಿಹೀನ ಗಾಯಕನಾಗಿ ಕಾಣಿಸಿಕೊಂಡಿದ್ದು, ದರ್ಶನ್ ನಟನೆ ಜನರ ಮೆಚ್ಚುಗೆ ಪಡೆದಿದ್ದರು.
ಇದು ದೊಡ್ಡ ಮಟ್ಟದಲದಲ್ಲಿ ಹೆಸರು ಮಾಡಿದ ಸಿನಿಮಾ ಆಗಿದ್ದು, ಇದರಲ್ಲಿ ನಟ ದರ್ಶನ್ ವಿಭಿನ್ನ ರೂಪದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಹೈದರಾಬಾದ್ ನಲ್ಲಿ ಸಿನಿಮಾ ಬಿಡುಗಡೆ ಕಾಣಲಿದೆ. 100 ಥಿಯೇಟರ್ ಪಕ್ಕಾ ಆಗಿದೆ. ಇನ್ನೂ 30 ಥಿಯೇಟರ್ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಹಳ್ಳಿಗಳಿಂದಲೂ ಕರೆ ಬರುತ್ತಿದೆ. ಹೈದರಾಬಾದ್ನ ಮೂರು ಥಿಯೇಟರ್ಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ ಎಂದು ವಿತರಕರು ಮಾಹಿತಿ ನೀಡಿದ್ದಾರೆ.