ಬೆಂಗಳೂರು : ‘ಚಾಲೆಂಜಿಂಗ್ ಸ್ಟಾರ್’ , ನಟ ದರ್ಶನ್ ಕಾಟೇರ ಸಿನಿಮಾದ ಸಕ್ಸಸ್ ಬಳಿಕ ವಿದೇಶಕ್ಕೆ ಹಾರಿದ್ದಾರೆ. ದುಬೈನಲ್ಲಿ ಮಸ್ತ್ ಎಂಜಾಯ್ ಮಾಡುತ್ತಿರುವ ನಟ ದರ್ಶನ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೊದಲೇ ನಟ ದರ್ಶನ್ ಪ್ರಾಣಿ ಪ್ರಿಯ. ದುಬೈನಲ್ಲಿ ಹುಲಿ-ಹೆಬ್ಬಾವುಗಳ ಜೊತೆ ನಟ ದರ್ಶನ್ ಆಟವಾಡಿದ್ದು, ಫೋಟೋ ವೈರಲ್ ಆಗಿದೆ. ಫೋಟೋ ನೋಡಿದ ಅಭಿಮಾನಿಗಳು ಗಾಬರಿಗೊಂಡು ಹುಷಾರು ಬಾಸ್..! ಎಂದು ಕಮೆಂಟ್ ಮಾಡಿದ್ದಾರೆ.
ಝೂ ಒಂದರಲ್ಲಿ ನಟ ದರ್ಶನ್ ಹಾವನ್ನು ಕೊರಳಿಗೆ ಸುತ್ತಿಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ. ಹುಲಿ ಮೈ ಸವರುತ್ತಿರುವ ಫೋಟೋ, ಚಿಂಪಾಂಜಿ ಜೊತೆ ಆಟವಾಡಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾಟೇರ ಸಿನಿಮಾದ ಬಳಿಕ ಕೊಂಚ ಗ್ಯಾಪ್ ತಗೊಂಡು ನಟ ದರ್ಶನ್ ದುಬೈ ನಲ್ಲಿ ಮಸ್ತ್ ಎಂಜಾಯ್ ಮಾಡಿದ್ದಾರೆ.