ಬೆಂಗಳೂರು : ಜೈಲುವಾಸ ಅನುಭವಿಸಿ ಜಾಮೀನಿನ ಮೂಲಕ ಹೊರಗೆ ಬಂದ ನಟ ದರ್ಶನ್ ‘ಡೆವಿಲ್’ ಸಿನಿಮಾದ ಶೂಟಿಂಗ್ ನಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.
ಈ ಬೆನ್ನಲ್ಲೇ ನಟ ದರ್ಶನ್ ತನ್ನ ಆಪ್ತರಿಗೆ ಶಾಕ್ ನೀಡಿದ್ದಾರೆ. ಅಚ್ಚರಿ ಎಂಬಂತೆ ನಟ ದರ್ಶನ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಸೇರಿ 6 ಜನರನ್ನ ಅನ್ ಫಾಲೋ ಮಾಡಿದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಷ್, ಪತ್ನಿ ಅವಿವಾ, ದಿನಕರ್ ತೂಗುದೀಪ್ , ಪುತ್ರ ವಿನೀಶ್ ನನ್ನು ಅನ್ ಫಾಲೋ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ.
ಇದರ ನಡುವೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಅಂದರೆ, ಇಂದಿನಿಂದ ನಟ ದರ್ಶನ್ ಮೈಸೂರಿನಲ್ಲಿ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಶೂಟಿಂಗ್ ಗೆ ನಟ ದರ್ಶನ ಗೆ ಡಿಸಿಪಿ ಮುತ್ತುರಾಜ್ ಅನುಮತಿ ನೀಡಿದ್ದಾರೆ.ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಚಿತ್ರೀಕರಣಕ್ಕೆ ಪ್ಲಾನ್ ಮಾಡಲಾಗಿದೆ. ಮಾರ್ಚ್ 12ರಿಂದ 14ರವರೆಗೆ ಅತಿಥಿಗೃಹದಲ್ಲಿ ಚಿತ್ರೀಕರಣ ನಡೆಯಲಿದೆ. ಮಾರ್ಚ್ 15ರಂದು ಲಲಿತ್ ಮಹಲ್ ಪ್ಯಾಲೇಸ್ ನಲ್ಲಿ ಚಿತ್ರೀಕರಣ ನಡೆಯಲಿದೆ.ಪೊಲೀಸ್ ಬಿಗಿ ಭದ್ರತೆಯಲ್ಲಿ ಚಿತ್ರೀಕರಣ ನಡೆಯಲಿದೆ. ಒಂದು ಪಾಳಿಯಲ್ಲಿ 10 ಪೊಲೀಸ್ ಸಿಬ್ಬಂದಿಯನ್ನು ಭದ್ರತೆ ನಿಯೋಜಿಸಲಾಗಿದೆ.