ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳೆಂದರೆ ಬಲು ಪ್ರೀತಿ. ಸಮಯ ಸಿಕ್ಕಾಗಲಿಲ್ಲ ಮೈಸೂರು ಸಮೀಪದ ತಮ್ಮ ಫಾರ್ಮ್ ಹೌಸ್ ನಲ್ಲಿರುವ ಹಸು, ಕರು, ಕುದುರೆಗಳೊಂದಿಗೆ ಕಾಲ ಕಳೆಯುತ್ತಾರೆ.
ಅಲ್ಲದೆ ಮೈಸೂರು ಮೃಗಾಲಯದ ಕೆಲವೊಂದು ಪ್ರಾಣಿಗಳನ್ನು ಸಹ ಅವರು ದತ್ತು ಪಡೆದಿದ್ದು, ಅವುಗಳ ನಿರ್ವಹಣಾ ವೆಚ್ಚವನ್ನು ಭರಿಸುತ್ತಿದ್ದಾರೆ. ಇದೀಗ ಅರಣ್ಯ ಇಲಾಖೆ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ದರ್ಶನ್ ಅವರನ್ನು ನೇಮಕ ಮಾಡಿದೆ.
ದರ್ಶನ್ ಅವರು ಈಗಾಗಲೇ ವನ್ಯಜೀವಿ ಛಾಯಾಗ್ರಾಹಕ ಹಾಗೂ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಈ ಹಿನ್ನೆಲೆಯಲ್ಲಿ ವನ್ಯಜೀವಿ ಮಂಡಳಿ ಸದಸ್ಯರನ್ನಾಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.