
ಮಂಗಳೂರು: ಕೇರಳದ ಕಣ್ಣೂರಿನ ಪ್ರಸಿದ್ಧ ಕ್ಷೇತ್ರ ಮಾಡಾಯಿಕಾವು ಶ್ರೀ ಭಗವತಿ ದೇವಸ್ಥಾನಕ್ಕೆ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ, ಪುತ್ರ ವಿನೀಶ್ ಸಮೇತ ಭೇಟಿ ನೀಡಿ ಶತ್ರು ಸಂಹಾರ ಯಾಗ ನಡೆಸಿದ್ದಾರೆ.
ಪುತ್ತೂರು ಸ್ನೇಹಿತರ ಮಾರ್ಗದರ್ಶನದಿಂದ ದರ್ಶನ್ ಶತ್ರು ಸಂಹಾರ ಪೂಜೆ ನೆರವೇರಿಸಿದ್ದು, ಅವರೊಂದಿಗೆ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿದ್ದಾನೆ. 2017ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕರೋಪಾಡಿ ಜಲೀಲ್ ಕೊಲೆ ಪ್ರಕರಣದಲ್ಲಿ ಆರೋಯಾಗಿದ್ದ ಪ್ರಜ್ವಲ್ ರೈ ಬಂಧಿತನಾಗಿದ್ದ.
ಶನಿವಾರ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಶತ್ರು ಸಂಹಾರ ಪೂಜೆ ಮಾಡುವಾಗ ಮತ್ತೊಬ್ಬ ಕೊಲೆ ಆರೋಪಿ ಪ್ರಜ್ವಲ್ ರೈ ಕೂಡ ಕಾಣಿಸಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.