ಬೆಂಗಳೂರು : ನಟ ಚೇತನ್ ಅಹಿಂಸಾ ಅಭಿನಯದ 100 ಕ್ರೋರ್ಸ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ.
ಚಿತ್ರದಲ್ಲಿ ರಾಹುಲ್ ಟೈಸನ್/ ರಾಹುಲ್ ಹರಿದಾಸ್, ಚೇತನ್ ಕುಮಾರ್, ಐಶ್ವರ್ಯಾ ಭಕುನಿ, ಆಮಿ ಏಲಾ, ಸಾಕ್ಷಿ ಚೌಧರಿ, ಆಂತ್ರಾ ರಾವತ್, ಶರತ್ ಲೋಹಿತಾಶ್ವ, ಸಮೀರ್, ಭದ್ರಮ್ ಮತ್ತು ವಾಸು ಇಂತೂರಿ ನಟಿಸಿದ್ದಾರೆ.
ವಿರಾಟ್ ಚಕ್ರವರ್ತಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಎಸ್ ಎಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿವಿಜಾ ಕಾರ್ತಿಕ್ ಮತ್ತು ಸಾಯಿಕಾರ್ತಿಕ್ ನಿರ್ಮಿಸಿದ್ದಾರೆ. ಸಾಯಿಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ. ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ‘100 ಕ್ರೋರ್ಸ್’ ಚಿತ್ರ ವೀಕ್ಷಿಸಿ ಎಂದು ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ.