
“ನಾನು ಧರಿಸುವ ಬಟ್ಟೆಯಿಂದ ಪ್ರತಿಯೊಬ್ಬರ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ಇನ್ನು ಮುಂದೆ ನೀವು ಬದಲಾದ ಉರ್ಫಿಯನ್ನು ನೋಡುತ್ತೀರಿ.” ಎಂದು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಬಟ್ಟೆಗಳಿಂದ್ಲೇ ಸುದ್ದಿಯಾಗ್ತಿದ್ದ ಉರ್ಫಿ ಟ್ವೀಟ್ ಗೆ ಹಲವರು ಅಚ್ಚರಿಪಡಿಸಿದ್ದಾರೆ. ಆಕೆಯ ಟ್ವೀಟ್ ನಂತರ ಅನೇಕ ಅಭಿಮಾನಿಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ.
ನೀವು ಇಷ್ಟಪಡುವುದನ್ನು ನೀವು ಧರಿಸುತ್ತೀರಿ, ನಿಮ್ಮಿಷ್ಟದಂತೆಯೇ ನೀವಿರಿ ಎಂದು ಕೆಲವರು ಹೇಳಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇದು ಏಪ್ರಿಲ್ ಫೂಲ್ ನ ತಮಾಷೆ ಎಂದು ಊಹಿಸಿದ್ದಾರೆ. ಆದರೆ ಉರ್ಫಿ ನಿಜವಾಗ್ಲೂ ಕ್ಷಮೆ ಕೇಳಿದ್ದಾರಾ ಅಥವಾ ಏಪ್ರಿಲ್ ಫೂಲ್ ಮಾಡಿದ್ದಾರಾ ಅನ್ನೋದು ಅವ್ರು ಮತ್ತೊಮ್ಮೆ ಬಹಿರಂಗವಾಗಿ ಕಾಣಿಸಿಕೊಂಡಾಗ ಗೊತ್ತಾಗುತ್ತೆ.