
ಬಿಗ್ ಬಾಸ್ ಖ್ಯಾತಿಯ ಶಶಿ ಅಭಿನಯದ ʼಮೆಹಬೂಬʼ ಚಿತ್ರದ ಟೀಸರ್ ಇತ್ತೀಚಿಗಷ್ಟೇ youtube ನಲ್ಲಿ ಬಿಡುಗಡೆಯಾಗಿ ಸಕ್ಕತ್ ಸೌಂಡ್ ಮಾಡಿದ್ದು, ಇನ್ನಷ್ಟು ನಿರೀಕ್ಷೆ ಹೆಚ್ಚಿಸುವಂತೆ ಮಾಡಿದೆ. ನಾಳೆ ಈ ಸಿನಿಮಾದ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಆಗಮಿಸಲಿದ್ದು, ಈ ಹಾಡನ್ನು ಲಾಂಚ್ ಮಾಡಲಿದ್ದಾರೆ.
ಅನುಪ್ ಆಂಟೋನಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಶಶಿ ಅವರಿಗೆ ಜೋಡಿಯಾಗಿ ಪಾವನ ಗೌಡ ಅಭಿನಯಿಸಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ಸಂಯೋಜನೆ ನೀಡಿದ್ದು, ಕೆ ಎಂ ಪ್ರಕಾಶ್ ಸಂಕಲನ, ಕಿರಣ್ ಅಂಪಾಪುರ ಛಾಯಾಗ್ರಹಣವಿದೆ. ಶಶಿ ಅವರೇ ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದು, ಉಮಾ ಮಹದೇವಯ್ಯ ಸಹ ನಿರ್ಮಾಪಕರಾಗಿದ್ದಾರೆ. ಇದೊಂದು ಕೇರಳದಲ್ಲಿ ನಡೆದ ನೈಜ ಘಟನಾಧಾರಿತ ಸಿನಿಮಾ ಎಂದು ಹೇಳಲಾಗಿದೆ
