ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಘಟನೆಯ ಎರಡನೇ ಚಿತ್ರ ‘ಬಹದ್ದೂರ್’ 2014ರಂದು ತೆರೆ ಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುವ ಮೂಲಕ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ರಿಲೀಸ್ ಆಗಿ ಇದೇ ಅಕ್ಟೋಬರ್ ಮೂರಕ್ಕೆ 10 ವರ್ಷಗಳಾಗಲಿರುವ ಕಾರಣ ಚಿತ್ರತಂಡ ಜೂನ್ 21ಕ್ಕೆ ರೀ ರಿಲೀಸ್ ಮಾಡುವುದಾಗಿ ಪ್ಲಾನ್ ಮಾಡಿದೆ. ಧ್ರುವ ಸರ್ಜಾ ಅವರ ಪಂಚಿಂಗ್ ಡೈಲಾಗ್ ಹಾಗೂ ಹಾಡುಗಳನ್ನು ಪ್ರೇಕ್ಷಕರು ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದಾಗಿದೆ.
ಈ ಚಿತ್ರದಲ್ಲಿ ಧ್ರುವ ಸರ್ಜಾ ಅವರಿಗೆ ಜೋಡಿಯಾಗಿ ರಾಧಿಕಾ ಪಂಡಿತ್ ಅಭಿನಯಿಸಿದ್ದು, ಪಿ.ರವಿಶಂಕರ್, ಶ್ರೀನಿವಾಸ ಮೂರ್ತಿ, ಅಚ್ಯುತ್ ಕುಮಾರ್, ಜೈ ಜಗದೀಶ್, ಸುಧಾ ರಾಣಿ, ವಿಶ್ವನಾಥ್ ಮುಂದಾಸಾದ್, ಪವಿತ್ರ ಲೋಕೇಶ್ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದು, ದೀಪು ಎಸ್ ಕುಮಾರ್ ಸಂಕಲನ, ಶ್ರೇಷ ಕುದುವಾಲಿ ಛಾಯಾಗ್ರಾಣವಿದೆ.