ಬೆಂಗಳೂರು : ಕಣ್ಣುಕುಕ್ಕುವ ಹೆಡ್ ಲೈಡ್ ಅಳವಡಿಕೆ ವಿರುದ್ಧ ಕ್ರಮ ಕೈಗೊಂಡ ಪೊಲೀಸರು ರಾಜ್ಯಾದ್ಯಂತ 8244 ಪ್ರಕರಣ ದಾಖಲಿಸಿದ್ದಾರೆ.
ಕಣ್ಣುಕುಕ್ಕುವ ಎಲ್ಇಡಿ ದೀಪಗಳನ್ನು ಅಳವಡಿಕೆ ಮಾಡಿಕೊಂಡಿರುವ ವಾಹನ ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಜುಲೈ 1 ರಿಂದ 7ರ ವರೆಗೆ ರಾಜ್ಯಾದ್ಯಂತ ಒಟ್ಟು 8,244 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಎಲ್ಇಡಿ ದೀಪಗಳನ್ನು ಅಳವಡಿಸಿಕೊಂಡಿರುವ ಚಾಲಕರ ವಿರುದ್ಧ ಕ್ರಮ ಕೈಗೊಂಡ ಮೊದಲ ರಾಜ್ಯ ಕರ್ನಾಟಕವಾಗಿದೆ.