300 ರೂಪಾಯಿ ಲಂಚ ಪಡೆದಿದ್ದಾನೆಂಬ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯ ಮೇಲ್ಮನವಿ ಆಲಿಸಿದ ಸುಪ್ರೀಂ ಕೋರ್ಟ್ ಪ್ರಕರಣದಿಂದ ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಸುಮಾರು 13 ವರ್ಷಗಳಿಂದ ಬಾಕಿ ಉಳಿದಿದ್ದ ಮೇಲ್ಮನವಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, 2005 ರಲ್ಲಿ ಪಂಜಾಬ್‌ನ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾಗಿದ್ದ 65 ವರ್ಷದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿತು. ಆರೋಪಿ ಲಂಚ ಪಡೆದಿರುವುದು ಪ್ರಕರಣದಲ್ಲಿ ಸಾಬೀತಾಗಿಲ್ಲವೆಂದು ಕೋರ್ಟ್ ಹೇಳಿತು.
2003 ರಲ್ಲಿ ಪಂಜಾಬ್‌ನ ಫರೀದ್‌ಕೋಟ್‌ನ ಸರ್ಕಾರಿ ಕಚೇರಿಯಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಜಗತಾರ್ ಸಿಂಗ್ ಅವರು ಪ್ರಮಾಣ ಪತ್ರದ ಪ್ರತಿಯನ್ನು ಪೂರೈಸಲು 300 ರೂ. ಲಂಚ ಕೇಳಿದ್ದರೆಂಬ ಆರೋಪವಿತ್ತು.
ಇದಕ್ಕಾಗಿ ಅವರು 2005 ರಲ್ಲಿ ವಿಚಾರಣಾ ನ್ಯಾಯಾಲಯದಿಂದ ಶಿಕ್ಷೆಗೊಳಗಾದರು ಮತ್ತು 2010 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೂಡ ಅವರ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ನಂತರ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ವರದಿಗಳ ಪ್ರಕಾರ, 65 ವರ್ಷದ ಜಗತಾರ್ ಸಿಂಗ್ ಅವರು 38 ದಿನಗಳ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು ಮತ್ತು 2008 ರಲ್ಲಿ ಜಾಮೀನು ಪಡೆದಿದ್ದರು. ಅವರು 2016 ರಲ್ಲಿ ಸೇವೆಯಿಂದ ನಿವೃತ್ತರಾದರು.