ಕಳೆದ ಎರಡು ವರ್ಷಗಳಿಂದೀಚೆಗೆ ಹೃದಯಾಘಾತ ಮತ್ತು ಹೃದಯ ಸ್ತಂಭನದ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಹೃದಯಾಘಾತ 50 ವರ್ಷ ದಾಟಿದವರಿಗೆ ಮಾತ್ರ ಆಗುತ್ತದೆ ಎಂಬ ನಂಬಿಕೆಯಿತ್ತು. ಆದ್ರೀಗ 18-20 ವರ್ಷ ವಯಸ್ಸಿನ ಯುವಕರು ಕೂಡ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ.
ಜಿಮ್ ಮತ್ತು ಪಾರ್ಕ್ ಗಳಲ್ಲಿ ವ್ಯಾಯಾಮ ಮಾಡುವ ಆರೋಗ್ಯವಂತರು ಕೂಡ ಇದಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಯುವಕರಲ್ಲಿ ಹೃದಯಾಘಾತದ ಅಪಾಯ ಏಕೆ ಹೆಚ್ಚುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು.
ಹೃದಯಾಘಾತಕ್ಕೆ ಕಾರಣ
ಹೃದಯಾಘಾತಕ್ಕೆ ಒಂದಲ್ಲ ಹಲವು ಕಾರಣಗಳಿವೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಆದರೆ ಪ್ರಮುಖ ಕಾರಣ ನಮ್ಮ ಜೀವನಶೈಲಿ. ಯುವಕರ ಕೆಲಸದ ಅವಧಿ ಹೆಚ್ಚಿರುವುದರಿಂದ ವ್ಯಾಯಾಮ ಮಾಡಲು ಅವರಿಗೆ ಸಮಯವಿಲ್ಲ. ಜೊತೆಗೆ ಏಕಾಂಗಿಯಾಗಿ ವಾಸಿಸುತ್ತಾರೆ. ಫಾಸ್ಟ್ ಫುಡ್‌ಗಳನ್ನು ತಿನ್ನುತ್ತಾರೆ. ಕೆಲಸದ ಒತ್ತಡ ತಾಳಲಾಗದೆ ಧೂಮಪಾನ ಅಥವಾ ಮದ್ಯಪಾನವನ್ನು ಮಾಡಲಾರಂಭಿಸುತ್ತಾರೆ.
ಇವೆಲ್ಲವೂ ಅವರ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಅನೇಕ ಬಾರಿ ಕುಟುಂಬದಲ್ಲಿ ಯಾರಿಗಾದರೂ ಹೃದಯದ ತೊಂದರೆ ಇದ್ದಲ್ಲಿ ಅದು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ.
ಪ್ರಸ್ತುತ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆ ಬಹುತೇಕ ನಗಣ್ಯವಾಗಿದೆ. ಎಲ್ಲರೂ ಕಾರಿನಲ್ಲಿ ಪ್ರಯಾಣಿಸಲು ಪ್ರಾರಂಭಿಸಿದ್ದಾರೆ. ವಾಕ್ ಮಾಡುವವರು ಅಪರೂಪ. ನಮ್ಮ ಮಾನಸಿಕ ಒತ್ತಡವನ್ನು ಹಂಚಿಕೊಳ್ಳಲು ಯಾರೂ ಇಲ್ಲ. ಈ ಎಲ್ಲಾ ಕಾರಣಗಳಿಂದ ಹೃದಯದ ಸಮಸ್ಯೆಗಳು ಹೆಚ್ಚಾಗುತ್ತವೆ ಮತ್ತು ಹೃದಯಾಘಾತ ಸಂಭವಿಸುತ್ತದೆ.
ಹೃದಯಾಘಾತವನ್ನು ತಪ್ಪಿಸಲು ಏನು ಮಾಡಬೇಕು ?
ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರ ಸೇವನೆಯಿಂದ ಹೃದಯದ ತೊಂದರೆಗಳನ್ನು ತಪ್ಪಿಸಬಹುದು. ಇದರ ಹೊರತಾಗಿ ನಿದ್ರೆಯ ಕೊರತೆ, ಒತ್ತಡ, ಬಿಪಿ, ಶುಗರ್ ಕೂಡ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಿದ್ದೆ, ಬಿಪಿ, ಶುಗರ್, ಒತ್ತಡ ಇವೆಲ್ಲವೂ ಸರಿಯಾಗಿರುವಂತೆ ನೋಡಿಕೊಳ್ಳಬೇಕು.
ಆಹಾರ ಕ್ರಮದ ಬಗ್ಗೆ ಎಚ್ಚರ ತಪ್ಪಿದರೆ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ. ಈ ಎಲ್ಲಾ ವಿಷಯಗಳ ಬಗ್ಗೆ ಗಮನ ಹರಿಸಿದರೆ ಹೃದಯವನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು. ವ್ಯಾಯಾಮ, ಉತ್ತಮ ಆಹಾರ, ನಿದ್ರೆ, ಧ್ಯಾನ-ಯೋಗವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ. ಧೂಮಪಾನ-ಮದ್ಯಪಾನದಿಂದ ದೂರವಿರಿ.
ಹೃದಯ ಆರೋಗ್ಯವಾಗಿರಲು ಏನು ಮಾಡಬೇಕು ?
ಆಹಾರದಲ್ಲಿ ಪ್ರೋಟೀನ್ ಅನ್ನು ಹೆಚ್ಚಿಸಿ. ಕಾರ್ಬೋಹೈಡ್ರೇಟ್ಗಳನ್ನು ಕಡಿಮೆ ಮಾಡಿ. ಹಣ್ಣುಗಳನ್ನು ನಿಯಮಿತವಾಗಿ ತಿನ್ನಿರಿ. ಉಪ್ಪು, ಸಕ್ಕರೆ, ಅಕ್ಕಿ ಮತ್ತು ಮೈದಾವನ್ನು ಹೆಚ್ಚು ಸೇವಿಸಬೇಡಿ.
ಒತ್ತಡವನ್ನು ಕಡಿಮೆ ಮಾಡಲು ಪ್ರತಿ ಪರಿಹಾರದ ಮೇಲೆ ಕೆಲಸ ಮಾಡಿ. ನಿದ್ರೆಯ ಮಾದರಿಯನ್ನು ಕಾಪಾಡಿಕೊಳ್ಳಿ. ನಿದ್ರಾಹೀತನೆ ಕೂಡ ಅಪಾಯಕಾರಿ. ಪ್ರತಿದಿನ 25-30 ನಿಮಿಷಗಳ ಕಾಲ ಕಾರ್ಡಿಯೋ ವ್ಯಾಯಾಮ ಮಾಡಿ.
ಹೃದಯಾಘಾತದ ಎಚ್ಚರಿಕೆ ಸಂಕೇತಗಳು
- ಆಹಾರ ಸೇವಿಸಿದ ನಂತರ ಹೊಟ್ಟೆಯಲ್ಲಿ ಅಸಿಡಿಟಿ ಕಾಣಿಸಿಕೊಳ್ಳುವುದು.
- ಹೆಚ್ಚು ನಡೆಯುವಾಗ ಅಥವಾ ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ.
- ದವಡೆಯಿಂದ ಸೊಂಟದವರೆಗೆ ಭಾರವಾದ ಭಾವನೆ.
- ಸುಲಭದ ಕೆಲಸಗಳನ್ನೂ ಮಾಡಲು ತೊಂದರೆ.
- ಹಠಾತ್ ಹೆದರಿಕೆಯ ಭಾವನೆ.
- ಕುಟುಂಬದ ಇತಿಹಾಸ.