ಅಸಿಡಿಟಿ ಬಹುತೇಕ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ನಮ್ಮ ಬದಲಾದ ಜೀವನ ಶೈಲಿ ಹಾಗೂ ಅನಾರೋಗ್ಯಕರ ಆಹಾರ ಪದ್ಧತಿ. ಆಸಿಡಿಟಿ ಜಾಸ್ತಿಯಾದಾಗಲೆಲ್ಲ ಮಾತ್ರೆ ಅಥವಾ ಔಷಧ ಸೇವನೆ ಸೂಕ್ತವಲ್ಲ. ಇದಕ್ಕೆ ಶಾಶ್ವತ ಪರಿಹಾರವೆಂದರೆ ಮನೆಮದ್ದು.
ಆಸಿಡಿಟಿಗೆ ಪ್ರಮುಖ ಕಾರಣಗಳೆಂದರೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೇ ಇರುವುದು. ದೀರ್ಘಕಾಲದವರೆಗೆ ಹಸಿದುಕೊಂಡಿದ್ದರೆ ಆಸಿಡಿಟಿ ಜಾಸ್ತಿಯಾಗುತ್ತದೆ. ಕರಿದ ತಿಂಡಿಗಳು, ಎಣ್ಣೆ ಪದಾರ್ಥ ಮತ್ತು ಅತಿ ಖಾರದ ತಿನಿಸುಗಳ ಸೇವೆನೆಯೂ ಆಸಿಡಿಟಿ ಸಮಸ್ಯೆಯನ್ನು ಹೆಚ್ಚಿಸುತ್ತದೆ.
ನಿಂಬೆಹಣ್ಣು, ಹುಳಿ ಮೊಸರು ಸೇವನೆಯಿಂದಲೂ ಕೆಲವರಿಗೆ ಈ ಸಮಸ್ಯೆಯಾಗಬಹುದು. ಒತ್ತಡ, ದೈಹಿಕ ವ್ಯಾಯಾಮದ ಕೊರತೆ ಕೂಡ ಆಸಿಡಿಟಿಗೆ ಕಾರವಾಗಬಲ್ಲದು. ಆಸಿಡಿಟಿ ಹೆಚ್ಚಾದಾಗ ಮೈಗ್ರೇನ್ ಅಥವಾ ತಲೆನೋವು ಕಾಣಿಸಿಕೊಳ್ಳುತ್ತದೆ.
ಇದಕ್ಕೆಲ್ಲ ಸುಲಭ ಪರಿಹಾರವೂ ಇದೆ. ಒಂದು ಚಮಚ ಓಮದ ಪುಡಿಗೆ ಒಂದು ಚಮಚ ಒಣಗಿದ ಶುಂಠಿ ಪುಡಿ ಬೆರೆಸಿ. ಸ್ವಲ್ಪ ರಾಕ್ ಸಾಲ್ಟ್ ಸೇರಿಸಿ. ಈ ಮಿಶ್ರಣವನ್ನು ಬಿಸಿ ಬಿಸಿ ನೀರಿಗೆ ಬೆರೆಸಿಕೊಂಡು ಸೇವಿಸಿ.
ಇದೇ ರೀತಿ ಒಂದು ಚಮಚ ಸೆಲರಿ ಬೀಜದ ಪುಡಿಗೆ ಒಂದು ಚಮಚ ಒಣಗಿದ ಶುಂಠಿ ಪುಡಿ ಬೆರೆಸಿ. ಸ್ವಲ್ಪ ರಾಕ್ ಸಾಲ್ಟ್ ಸೇರಿಸಿ. ಈ ಮಿಶ್ರಣವನ್ನು ಬಿಸಿ ಬಿಸಿ ನೀರಿಗೆ ಬೆರೆಸಿಕೊಂಡು ಸೇವಿಸಿ.
ಒಂದು ಚಮಚ ಓಮವನ್ನು ಮೂರು ಚಮಚ ನಿಂಬೆ ರಸದಲ್ಲಿ ನೆನೆಸಿ. ಅದಕ್ಕೆ ಬ್ಲಾಕ್ ಸಾಲ್ಟ್ ಸೇರಿಸಿಕೊಂಡು ದಿನಕ್ಕೆ ಎರಡು ಬಾರಿ ಸೇವನೆ ಮಾಡುವುದರಿಂದಲೂ ಉದರ ಬಾಧೆ ಕಡಿಮೆಯಾಗುತ್ತದೆ.
ಓಮ ಹೊಟ್ಟೆಯಲ್ಲಿರುವ ಗ್ಯಾಸ್ ನಿವಾರಣೆ ಮಾಡುತ್ತದೆ. ಹಾಗಾಗಿ ಒಂದು ಚಮಚ ಓಮಕ್ಕೆ ಸ್ವಲ್ಪ ಬ್ಲಾಕ್ ಸಾಲ್ಟ್ ಬೆರೆಸಿಕೊಂಡು ಅಗಿದು ನುಂಗಿದರೂ ರಿಲ್ಯಾಕ್ಸ್ ಸಿಗುತ್ತದೆ.
3-4 ಚಮಚ ಓಮವನ್ನು ಅರ್ಧ ಲೀಟರ್ ನೀರಿಗೆ ಹಾಕಿ ಅದು ಕಾಲು ಲೀಟರ್ ನಷ್ಟಾಗುವವರೆಗೆ ಕುದಿಸಿ. ಬಳಿಕ ಅದನ್ನು ಕುಡಿಯಿರಿ.
ಹೂಬೆಚ್ಚಗಿನ ನೀರಿಗೆ ಓಮ ಬೆರೆಸಿಕೊಂಡು 7-10 ದಿನಗಳವರೆಗೆ ನಿಯಮಿತವಾಗಿ ಸೇವಿಸುತ್ತ ಬಂದರೆ ಆಸಿಡಿಟಿಯಿಂದ ಮುಕ್ತಿ ಹೊಂದಬಹುದು.
ಇದಲ್ಲದೆ ಓಮ, ಜೀರಿಗೆ ಹಾಗೂ ಒಣ ಶುಂಠಿ ಎಲ್ಲವನ್ನೂ ಸೇರಿಸಿ ಪುಡಿ ಮಾಡಿಕೊಂಡು ದಿನಕ್ಕೆರಡು ಬಾರಿ ಸ್ವಲ್ಪ ಸ್ವಲ್ಪ ಸೇವಿಸುತ್ತ ಬಂದರೆ ಗ್ಯಾಸ್ ಹಾಗೂ ಆಸಿಡಿಟಿ ಮಾಯವಾಗುತ್ತದೆ.