
ಬೆಂಗಳೂರು: ಬೆಂಗಳೂರಿನಲ್ಲಿ ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ ನಡೆಸಲಾಗಿದೆ. ಮನೆಯ ಜಗುಲಿಯಲ್ಲಿ ಮಲಗಿದ್ದ ದೇವಿ ಅವರ ಮೇಲೆ ದುಷ್ಕರ್ಮಿಗಳು ಆಸಿಡ್ ದಾಳಿ ನಡೆಸಿದ್ದಾರೆ.
ನಂದಿನಿ ಲೇಔಟ್ ಗಣೇಶ ಬ್ಲಾಕ್ ನಲ್ಲಿ ಮಾರ್ಚ್ 18ರಂದು ಘಟನೆ ನಡೆದಿದ್ದು, ರಂಗಭೂಮಿ ಸಹಪಾಠಿಗಳು ದಾಳಿ ನಡೆಸಿದ್ದಾರೆ. ಆರೋಪಿಗಳಾದ ರಮೇಶ್, ಸ್ವಾತಿ, ಯೋಗೇಶ್ ಅವರನ್ನು ಬಂಧಿಸಲಾಗಿದೆ. ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.