ಬೆಂಗಳೂರು : ಬಿಬಿಎಂಪಿಯಲ್ಲಿ ಮಾರ್ಷಲ್ ಹುದ್ದೆ ಕೊಡಿಸುವುದಾಗಿ 200 ಮಂದಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾರ್ಷಲ್ ಹುದ್ದೆ ಕೊಡಿಸುವುದಾಗಿ ಕೆಲಸದ ಅಮಿಷವೊಡ್ಡಿ ಹಣ ಪಡೆದು ವಂಚಿಸಿದ್ದಾಗಿ ಹೊಸಕೋಟೆ ನಿವಾಸಿ ಬಿ.ಕಾಂ ವಿದ್ಯಾರ್ಥಿಯೊಬ್ಬರು ಹಲಸೂರು ಗೇಟ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಬಿಬಿಎಂಪಿಯಲ್ಲಿ ತಾನು ಕೆಲಸ ಮಾಡಿಕೊಂಡಿರುವುದಾಗಿ ಸಂತ್ರಸ್ತರಿಗೆ ಹೇಳಿ ನಂಬಿಸಿದ್ದಾನೆ. ಅಲ್ಲದೇ 200ಕ್ಕೂ ಹೆಚ್ಚು ಮಂದಿಯಿಂದ ರೂ.3,000 ಹಣವನ್ನು ಫೋನ್ ಪೇ ಮೂಲಕ ಪಡೆದುಕೊಂಡಿದ್ದಾನೆ” ಎಂದು ತಿಳಿದು ಬಂದಿದೆ.
ಮೋಸ ಹೋದ ಉದ್ಯೋಗಾಂಕ್ಷಿಗಳು ಇನ್ನೇನು ಕೆಲಸ ಸಿಕ್ಕಿತು ಎಂದು ಬಿಬಿಎಂಪಿ ಕಚೇರಿಗೆ ಆದೇಶ ಪತ್ರ ಹಿಡಿದು ಹೋದಾಗ ನಕಲಿ ಆದೇಶ ಪತ್ರ ಎಂಬುದು ಗೊತ್ತಾಗಿದೆ ಎಂದು ತಿಳಿದು ಬಂದಿದೆ.