ಹಣಕಾಸು ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಮಹಾಲಕ್ಷ್ಮಿ ಪತಿ , ತಮಿಳು ಚಲನಚಿತ್ರ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಉತ್ತಮ ಲಾಭ ಸಿಗುತ್ತದೆ ಎಂದು ಹೇಳಿ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ 16 ಕೋಟಿ ರೂ.ವರೆಗೆ ವಂಚಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂಬಂಧ ಚೆನ್ನೈನ ಬಾಲಾಜಿ ನೀಡಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ.
ರವೀಂದರ್ ಚಂದ್ರಶೇಖರನ್ ಅವರು ಲಿಬ್ರಾ ಪ್ರೊಡಕ್ಷನ್ಸ್ ಹೆಸರಿನಲ್ಲಿ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ರವೀಂದರ್ ಚಂದ್ರಶೇಖರ್ ಅವರು ಮಹಾಲಕ್ಷ್ಮಿ ಅವರ ಜೊತೆ ಮದುವೆ ಮಾಡಿಕೊಂಡ ನಂತರ ಸೋಶಿಯಲ್ ಮೀಡಿಯಾದಲ್ಲಿ ಬಹಳ ಫೇಮಸ್ ಆಗಿದ್ದರು.
ನಂತರ ಈ ಪ್ರಕರಣದಲ್ಲಿ ರವೀಂದರ್ ಚಂದ್ರಶೇಖರನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆಯ ಬಗ್ಗೆ ರವೀಂದರ್ ಚಂದ್ರಶೇಖರನ್ ಬಾಲಾಜಿಗೆ ತಿಳಿಸಿದ್ದರು . ಹೆಚ್ಚು ಹೂಡಿಕೆ ಮಾಡಿದರೆ, ಅವರನ್ನು ಪಾಲುದಾರರಾಗಿ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಇದನ್ನು ನಂಬಿದ ಬಾಲಾಜಿ ರವೀಂದರ್ ಚಂದ್ರಶೇಖರನ್ ಅವರಿಗೆ 16 ಕೋಟಿ ರೂ.ಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ಸಂಬಂಧ ಚೆನ್ನೈ ಕೇಂದ್ರ ಅಪರಾಧ ವಿಭಾಗಕ್ಕೆ ದೂರು ನೀಡಲಾಗಿದ್ದು , ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಈಗ ರವೀಂದರ್ ಚಂದ್ರಶೇಖರ್ ಅವರನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.ಇತ್ತೀಚೆಗೆ ರವೀಂದ್ರನ್ ಚಂದ್ರಶೇಖರನ್ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಪತ್ನಿ ಮಹಾಲಕ್ಷ್ಮಿ ಅವರೊಂದಿಗೆ ಆಚರಿಸಿಕೊಂಡಿದ್ದರು. ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಕೂಡ ಗಿಟ್ಟಿಸಿಕೊಂಡಿದೆ.