alex Certify ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ – ಕೊಲೆ ಪ್ರಕರಣದ ಆರೋಪಿಗಿತ್ತು ‘ಪೋರ್ನ್’ ವೀಕ್ಷಣೆ ಚಟ; ಈ ದುರಭ್ಯಾಸ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯಿರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ – ಕೊಲೆ ಪ್ರಕರಣದ ಆರೋಪಿಗಿತ್ತು ‘ಪೋರ್ನ್’ ವೀಕ್ಷಣೆ ಚಟ; ಈ ದುರಭ್ಯಾಸ ಎಷ್ಟು ಅಪಾಯಕಾರಿ ಎಂಬುದನ್ನು ತಿಳಿಯಿರಿ…!

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ಈ ಪ್ರಕರಣದಲ್ಲಿ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಹೆಸರು ಮುನ್ನೆಲೆಗೆ ಬರುತ್ತಿದೆ. ಆರೋಪಿ ಸಂಜಯ್ ರಾಯ್ ಪೋರ್ನ್‌ ಚಟ ಹೊಂದಿದ್ದ ಎನ್ನಲಾಗ್ತಾ ಇದೆ. ಇದಕ್ಕೆ ಸಂಬಂಧಿಸಿದ ಹಲವು ವಿಚಿತ್ರ ವಿಷಯಗಳು ಆತನ ಫೋನ್‌ನಲ್ಲಿ ಪತ್ತೆಯಾಗಿವೆ. ಸಂಜಯ್ ರಾಯ್ ಈವರೆಗೆ 4 ಬಾರಿ ಮದುವೆಯಾಗಿದ್ದಾನೆ.

ಏನಿದು ಪೋರ್ನ್‌ ಚಟ ?

ಅಶ್ಲೀಲತೆಯನ್ನು ವೀಕ್ಷಿಸುವ ದುರಭ್ಯಾಸ ಇದು. ವರದಿಯ ಪ್ರಕಾರ  ಅಶ್ಲೀಲ ವ್ಯಸನದ ಪ್ರಮಾಣವು 3 ರಿಂದ 6 ಪ್ರತಿಶತದಷ್ಟು ಇರಬಹುದು. ಇದು ಎಷ್ಟು ಅಪಾಯಕಾರಿ ಎಂಬುದನ್ನು ಊಹಿಸುವುದೂ ಅಸಾಧ್ಯ.

ಪೋರ್ನ್‌ ವ್ಯಸನದ ಲಕ್ಷಣಗಳು

ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುವ ಚಟವು ಅಪಾಯಕಾರಿ. ಇದರ ಲಕ್ಷಣಗಳು ದೇಹದ ಮೇಲೆ ಭಯಾನಕ ರೀತಿಯಲ್ಲಿ ಪರಿಣಾಮ ಬೀರುತ್ತವೆ. ಜೀವನದ ಇತರ ಕೆಲಸಗಳ ಮೇಲೂ ಪರಿಣಾಮ ಬೀರುತ್ತವೆ. ಈ ಚಟ ಅಂಟಿಸಿಕೊಂಡವರು ದಿನದ ಬಹುಪಾಲು ಸಮಯವನ್ನು ಪೋರ್ನ್ ನೋಡುವುದರಲ್ಲಿ ಕಳೆಯುತ್ತಾರೆ. ಸಂಬಳದ ಬಹುಪಾಲು ಭಾಗವನ್ನು ಪೋರ್ನ್ ವೀಕ್ಷಿಸಲು ವ್ಯಯಿಸುತ್ತಾರೆ. ಈ ವ್ಯಸನವನ್ನು ಬಿಡಲು ಬಯಸಿದರೂ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ.

ಪೋರ್ನ್ ನೋಡುವ ಜನರು ಬಹಳಷ್ಟು ಆತಂಕ ಮತ್ತು ಖಿನ್ನತೆಗೆ ಒಳಗಾಗುತ್ತಾರೆ. ಅದಕ್ಕಾಗಿಯೇ ಅವರು ಹೆಚ್ಚಿನ ಸಮಯವನ್ನು ಪೋರ್ನ್ ನೋಡುವುದರಲ್ಲಿ ಕಳೆಯುತ್ತಾರೆ. ಸಂಗಾತಿಯಿಂದ ದೈಹಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಇರುವವರು ಕೂಡ ಹೆಚ್ಚು ಪೋರ್ನ್ ನೋಡುತ್ತಾರೆ.ಪೋರ್ನ್‌ ಚಟ ಪತಿ-ಪತ್ನಿಯ ಮಧ್ಯೆ ಭಿನ್ನಾಭಿಪ್ರಾಯಕ್ಕೂ ಕಾರಣವಾಗುತ್ತದೆ. ಲೈಂಗಿಕ ಅತೃಪ್ತಿ ಕೂಡ ಈ ದುರಭ್ಯಾಸಕ್ಕೆ ಕಾರಣ.

ಅಶ್ಲೀಲ ಚಿತ್ರ ಮತ್ತು ವಿಡಿಯೋ ವೀಕ್ಷಣೆಯ ಚಟ ಹೊಂದಿರುವವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಲೇ ಇರುತ್ತಾರೆ. ಹೆಚ್ಚಿನ ಸಮಯವನ್ನು ಬೇರೆಡೆ ಕಳೆಯುತ್ತಾರೆ. ಪೋರ್ನ್ ನೋಡುವ ಅವಧಿಯನ್ನು ಹೆಚ್ಚಿಸುತ್ತಾರೆ.

ಅಶ್ಲೀಲ ವ್ಯಸನದ ಲಕ್ಷಣಗಳು ಗೋಚರಿಸಿದರೆ, ಔಷಧ ಮತ್ತು ಚಿಕಿತ್ಸೆಯ ಮೂಲಕ ತಕ್ಷಣವೇ ಗುಣಪಡಿಸಬಹುದು. ಮಾನಸಿಕ ಚಿಕಿತ್ಸೆಯ ಮೂಲಕ ವ್ಯಕ್ತಿಯನ್ನು ಗುಣಪಡಿಸಬಹುದು. ಈ ಅವಧಿಯಲ್ಲಿ ರೋಗಿಗೆ ತರಬೇತಿಯನ್ನೂ ನೀಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...