ಮಂಡ್ಯ: ವ್ಯಕ್ತಿಯೊಬ್ಬ ವಿಚಾರಣೆಗೆ ಎಂದು ಬಂದು ಎಎಸ್ ಐ ಮೇಲೆಯೇ ನಡುರಸ್ತೆಯಲ್ಲಿ ಹಲ್ಲೆ ನಡೆಸಿ ರಂಪಾಟ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ.
ನಾಗಮಂಗಲ ಗ್ರಾಮಾಂತರ ಎಎಸ್ಐ ರಾಜು ಮಜ್ಜನ ಕೊಪ್ಪಲು ಮೇಲೆ ಪೂಜಾರಿ ಕೃಷ್ಣ ಹಲ್ಲೆ ನಡೆಸಿದ್ದಾರೆ. ಆರೋಪಿ ಕೃಷ್ಣ ವಿರುದ್ಧ ಆತನ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಹಣ ನೀಡುವಂತೆ ಪ್ರತಿದಿನ ಕಿರುಕುಳ ನೀಡುತ್ತಿರುವುದಾಗಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಕೃಷ್ಣನನ್ನು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಕರೆತರಲು ಎಎಸ್ಐ ರಾಜು ಹೊರಟಿದ್ದರು. ನಾಗಮಂಗಲದ ಕೋರ್ಟ್ ಬಳಿ ನಿಂತಿದ್ದ ಕೃಷ್ಣನನ್ನು ಎಎಸ್ಐ ಠಾಣೆಗೆ ಕರೆದಿದ್ದಾರೆ. ಠಾಣೆಗೆ ಬರಲು ಆತ ಒಪ್ಪಿಲ್ಲ. ಕೃಷ್ಣನ ಕಾಲರ್ ಹಿಡಿದು ಬಲವಂತವಾಗಿ ಆಟೋಗೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಎಎಸ್ ಐಯನ್ನು ತಳ್ಳಿದ್ದಾನೆ. ತಳ್ಳು ತಿದ್ದಂತೆ ಎಎಸ್ಐ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಆರೋಪಿ ಕೃಷ್ಣನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದಾರೆ.