ಹಾಸನ: ಕಾರ್ ಗೆ ವಕೀಲರ ಸ್ಟಿಕ್ಕರ್ ಅಂಟಿಸಿ ಅಕ್ರಮವಾಗಿ ಗೋಮಾಂಸ ತುಂಬಿ ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿಯನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ರೋಷನ್ ಬಂಧಿತ ಆರೋಪಿ. ಹಾಸನದ ಬೈಪಾಸ್ ರಸ್ತೆಯಲ್ಲಿ ಸ್ಯಾಂಟ್ರೋ ಕಾರ್ ನಲ್ಲಿ ಗೋಮಾಂಸ ಸಾಗಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಕಾರ್ಯಕರ್ತರು ಕಾರ್ ಅನ್ನು ಹಿಂಬಾಲಿಸಿದ್ದಾರೆ.
ಕಾರ್ ಹಿಂಭಾಗದ ಗ್ಲಾಸ್ ಮೇಲೆ ಅಡ್ವೊಕೇಟ್ ಸ್ಟಿಕ್ಕರ್ ಅಂಟಿಸಿ ಒಳಗೆ ಟಾರ್ಪಲ್ ನಲ್ಲಿ ಗೋಮಾಂಸ ಮುಚ್ಚಿಡಲಾಗಿತ್ತು. ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸಕಲೇಶಪುರ ನಗರ ಬೈಪಾಸ್ ರಸ್ತೆಯಿಂದ ಕಪ್ಪಿನಕೋಡಿ ಸಮೀಪ ಕುಶಾಲನಗರ ಬಡಾವಣೆ ಬಳಿ ಕಾರ್ ತಡೆದು ಪರಿಶೀಲಿಸಿದಗ ಒಂದು ಕ್ವಿಂಟಲ್ ಗೂ ಅಧಿಕ ಗೋಮಾಂಸ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ.