ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಲಿ ಎಂದು ಎಲ್ಲರೂ ಬಯಸ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಕೆಲವೊಂದು ನಿಯಮಗಳನ್ನು ಪಾಲನೆ ಮಾಡ್ಬೇಕಾಗುತ್ತದೆ. ಮನೆ ನಿಮ್ಮಿಷ್ಟದಂತೆ ಇರುವ ಬದಲು ವಾಸ್ತು ಶಾಸ್ತ್ರದಂತೆ ಇದ್ರೆ ಲಕ್ಷ್ಮಿ ಒಲಿಯೋದ್ರಲ್ಲಿ ಎರಡು ಮಾತಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಜಲಪಾತದ ಫೋಟೋ ಅಥವಾ ನೀರಿನ ಕಾರಂಜಿಯಿರುತ್ತದೆ. ಆದ್ರೆ ಅದನ್ನು ಎಲ್ಲೆಲ್ಲೋ ಇಡೋದ್ರಿಂದ ವಾಸ್ತು ದೋಷವುಂಟಾಗುತ್ತದೆ. ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸರಿಯಾದ ದಿಕ್ಕಿಗೆ ನೀರಿನ ಕಾರಂಜಿಯನ್ನು ಹಾಕಬೇಕು. ಮನೆಯ ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿ ನೀರಿನ ಕಾರಂಜಿ ಹಾಕಬೇಕು. ಇದು ಮನೆಯ ಸಂತೋಷ ಮತ್ತು ಸಮೃದ್ಧಿ ಹೆಚ್ಚಿಸುವ ಜೊತೆಗೆ ಆರ್ಥಿಕ ವೃದ್ಧಿಗೆ ನೆರವಾಗುತ್ತದೆ.
ಮನೆಗೆ ಜಲಪಾತದ ಫೋಟೋ ತಂದಿದ್ದರೆ ಅದನ್ನು ಮನೆಯ ಬೆಡ್ ರೂಮಿನಲ್ಲಿ ಹಾಕಬೇಡಿ. ಜಲಪಾತದ ಫೋಟೋವನ್ನು ಮನೆಯ ಬಾಲ್ಕನಿಯಲ್ಲಿ ಹಾಕಿ. ಬಾಲ್ಕನಿಯಲ್ಲಿ ನೀರಿಗೆ ಸಂಬಂಧಿಸಿದ ಫೋಟೋ, ವಸ್ತುವನ್ನು ಇಡಬಹುದು. ಕಾರಂಜಿ, ನೀರಿನ ಅಥವಾ ನೀರಿಗೆ ಸಂಬಂಧಿಸಿದ ಯಾವುದೇ ಚಿತ್ರವನ್ನು ಹಾಕಬಹುದು. ಇದರಿಂದ ಕುಟುಂಬಸ್ಥರ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ.
ಅಡುಗೆಮನೆಯಲ್ಲಿ ಎಂದಿಗೂ ನೀರು ಅಥವಾ ಕಾರಂಜಿ ಇಡಬಾರದು. ಇದು ಮನೆಯಲ್ಲಿ ನಷ್ಟಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ ಕುಡಿಯುವ ನೀರು ಅಥವಾ ಅಡಿಗೆ ಮಾಡಲು ಬಳಸುವ ನೀರು ಮಾತ್ರ ಇರಬೇಕು.
ಹಾಗೆಯೇ ವಾಸ್ತು ಪ್ರಕಾರ, ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮಣ್ಣಿನ ಪಾತ್ರೆಯಲ್ಲಿ ನೀರು ತುಂಬಿಸಿ ದಕ್ಷಿಣ ದಿಕ್ಕಿಗೆ ಇಡುವುದ್ರಿಂದ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.