ಮನೆಯ ಮುಖ್ಯ ಭಾಗ ಅಡುಗೆ ಮನೆ. ಆಹಾರ ತಯಾರಾಗುವ ಅಡುಗೆ ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಅಡುಗೆ ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡುವ ಜೊತೆಗೆ ವಾಸ್ತು ಶಾಸ್ತ್ರದಂತೆ ವಸ್ತುಗಳನ್ನಿಟ್ಟರೆ ಮನೆಯಲ್ಲಿ ಧನ-ದಾನ್ಯದ ಜೊತೆ ಸುಖ-ಸಮೃದ್ಧಿಯ ಜೀವನ ನಮ್ಮದಾಗುತ್ತದೆ.
ವಾಸ್ತು ಶಾಸ್ತ್ರಕ್ಕನುಗುಣವಾಗಿ ಅಡುಗೆ ಮನೆ ನಿರ್ಮಾಣ ಮಾಡಲು ಎಲ್ಲರಿಗೂ ಸಾಧ್ಯವಿಲ್ಲ. ಅಂತವರು ಅಡುಗೆ ಮನೆಯಲ್ಲಿ ವಸ್ತುಗಳನ್ನಿಡುವಾಗ ವಾಸ್ತು ಶಾಸ್ತ್ರವನ್ನು ಪಾಲಿಸಬೇಕು.
ಅಡುಗೆ ಮನೆಯಲ್ಲಿ ಬೆಲ್ಲ ಇಡುವುದರಿಂದ ಕುಟುಂಬಸ್ಥರ ನಡುವೆ ಮಧುರ ಸಂಬಂಧ ಮುಂದುವರೆಯುತ್ತದೆ.
ಅಡುಗೆ ಮನೆಯಲ್ಲಿ ಒಡೆದ, ಹಾಳಾಗಿರುವ ಪಾತ್ರೆಗಳನ್ನು ಇಡಬಾರದು. ಇದ್ರಿಂದ ಮನೆಯಲ್ಲಿ ಅಶಾಂತಿ ನೆಲೆಸುತ್ತದೆ.
ಅಡುಗೆ ಮನೆಯಲ್ಲಿ ಉಪ್ಪಿನ ಜೊತೆ ಅರಿಶಿನವನ್ನು ಇಡಬಾರದು. ಇದು ಕುಟುಂಬಸ್ಥರಲ್ಲಿ ಮಾನಸಿಕ ಸಮಸ್ಯೆಗೆ ಕಾರಣವಾಗುತ್ತದೆ.
ಅಡುಗೆ ಮನೆಯಲ್ಲಿ ಎಂದೂ ಅಳಬಾರದು. ಹೀಗೆ ಮಾಡಿದ್ರೆ ಅಸ್ವಸ್ಥತೆ ಹೆಚ್ಚಾಗುತ್ತದೆ.
ಅಡುಗೆ ಮನೆಯ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಸ್ವಚ್ಛತೆಯಿದ್ದಲ್ಲಿ ಮಾತ್ರ ತಾಯಿ ಅನ್ನಪೂರ್ಣೆ ನೆಲೆಸಿರುತ್ತಾಳೆ.
ಉತ್ತರ-ದಕ್ಷಿಣ ದಿಕ್ಕಿನಲ್ಲಿ ಸ್ಟೋರ್ ರೂಂ, ಫ್ರಿಜ್, ಪಾತ್ರೆ ಹಾಗೂ ಪೊರಕೆಯನ್ನಿಡುವ ಸ್ಥಾನ ಆಯ್ಕೆ ಮಾಡಿಕೊಳ್ಳಬೇಡಿ.
ಒಡೆದ ಬಾಗಿಲು, ಬಿರುಕುಬಿಟ್ಟ ಗೋಡೆ, ಮಸುಕಾದ ಬಣ್ಣವಿರುವ ಜಾಗದಲ್ಲಿ ರಾಹು ವಾಸವಾಗಿರುತ್ತಾನೆ. ಅಡಿಗೆ ಮನೆ ತಣ್ಣಗಿದ್ದು, ಸರಿಯಾಗಿ ಬೆಳಕು ಬರುವುದಿಲ್ಲವೆಂದಾದ್ರೆ ಅಲ್ಲಿಯೂ ರಾಹು ನೆಲೆಸಿರುತ್ತಾನೆ.