ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಕೆಲವೊಂದು ವಸ್ತುಗಳು ಅವಶ್ಯವಾಗಿ ಇರಬೇಕು. ಈ ವಸ್ತುಗಳು ಮನೆಯಲ್ಲಿದ್ದರೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಒಂದು ವೇಳೆ ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ದರೆ ಅದ್ರ ದಿಕ್ಕಿನ ಬಗ್ಗೆ ಅಗತ್ಯವಾಗಿ ಗಮನ ನೀಡಿ.
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕನ್ನು ಜಲದ ದಿಕ್ಕೆಂದು ಪರಿಗಣಿಸಲಾಗಿದೆ. ಹಾಗಾಗಿ ಉತ್ತರ ದಿಕ್ಕಿಗೆ ನೀರಿನ ಹೂಜಿಯನ್ನಿಡಿ. ಮನೆಯಲ್ಲಿ ಫ್ರಿಜ್, ವಾಟರ್ ಫಿಲ್ಟರ್ ಇದ್ದರೂ ವಾಸ್ತು ಶಾಸ್ತ್ರದ ಅನುಸಾರ ಮನೆಯಲ್ಲಿ ಹೂಜಿಯನ್ನಿಡಿ. ಅದ್ರ ನೀರನ್ನು ಪ್ರತಿದಿನ ಬದಲಾಯಿಸಿ.
ಮನಿ ಪ್ಲಾಂಟ್ ಮನೆಯಲ್ಲಿರಲಿ. ವಾಸ್ತು ಶಾಸ್ತ್ರದ ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದು ಒಳ್ಳೆಯದು. ಆಗ್ನೇಯ ದಿಕ್ಕು ಭಗವಂತ ಗಣೇಶನ ದಿಕ್ಕು. ಈ ದಿಕ್ಕನ್ನು ಶುಕ್ರ ಪ್ರತಿನಿಧಿಸುತ್ತದೆ. ಗಣೇಶ ಅಮಂಗಲವನ್ನು ನಾಶ ಮಾಡ್ತಾನೆ. ಸುಖ-ಸಮೃದ್ಧಿಯ ಗ್ರಹ ಶುಕ್ರ. ಹಾಗಾಗಿ ಮನೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಟ್ಟರೆ ಅದು ಶುಭ.
ಮನೆಯ ವಾಸ್ತು ದೋಷ ನಿವಾರಣೆಗೆ ವಾಸ್ತು ಪುರುಷನ ಪೂಜೆ ಮಾಡಬೇಕು. ಮನೆಯಲ್ಲಿ ವಾಸ್ತು ಪುರುಷನ ಫೋಟೋ ಅಥವಾ ಮೂರ್ತಿಯನ್ನು ಇಡಬೇಕು.
ಮನೆಯಲ್ಲಿ 10 ಪಿರಾಮಿಡ್ ಇಡಿ. ಇದು ವಾಸ್ತು ದೋಷವನ್ನು ಕಡಿಮೆ ಮಾಡುತ್ತದೆ.
ಮನೆಯ ಮುಖ್ಯ ದ್ವಾರದ ಮುಂದೆ ಸ್ವಸ್ತಿಕದ ಚಿಹ್ನೆ ಇಡಿ. ಶುಭ-ಲಾಭ ಅಥವಾ ಗಣೇಶನ ಚಿತ್ರವನ್ನೂ ಮುಖ್ಯ ದ್ವಾರದ ಬಳಿ ಇಡಿ.
ಲಕ್ಷ್ಮಿ ಮೂರ್ತಿ ಅಥವಾ ಫೋಟೋದ ಜೊತೆ ಕುಬೇರನ ಮೂರ್ತಿಯನ್ನು ಇಡಿ.
ಪಂಚಮುಖಿ ಹನುಮಂತ ವಾಸ್ತು ದೋಷವನ್ನು ದೂರ ಮಾಡ್ತಾನೆ.
ಭಗವಂತ ವಿಷ್ಣು ಹಾಗೂ ಲಕ್ಷ್ಮಿ ಜೊತೆ ಶಂಖವನ್ನಿಡಿ.
ದೇವರ ಮನೆಯಲ್ಲಿ ತೆಂಗಿನ ಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿಡಿ.