ಕಚೇರಿಯಿರಲಿ, ಮನೆಯಿರಲಿ ಅಲ್ಲಿರುವ ಪ್ರತಿಯೊಂದು ವಸ್ತುವೂ ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆ. ದಿಕ್ಕು, ವಸ್ತು, ಬಣ್ಣ ಎಲ್ಲವೂ ನಮ್ಮ ಏಳ್ಗೆ ಮೇಲೆ ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಿಷ್ಯದ ಬಗ್ಗೆಯೂ ವಿವರವಾಗಿ ಹೇಳಲಾಗಿದೆ. ನಮಗೆ ತಿಳಿಯದೇ ನಾವು ಕೆಲವೊಂದು ತಪ್ಪುಗಳನ್ನು ಮಾಡಿರುತ್ತೇವೆ. ಅದು ಶುಭ ಫಲ ನೀಡುವ ಬದಲು ಅಶುಭ ಫಲಕ್ಕೆ ದಾರಿಯಾಗುತ್ತದೆ.
ಕಚೇರಿ ಅಂದ್ಮೇಲೆ ಟೇಬಲ್, ಕುರ್ಚಿಗಳು ಇರಲೇಬೇಕು. ಅನೇಕರು ಆಕರ್ಷಕ ಕುರ್ಚಿಗಳನ್ನು ಕಚೇರಿಯಲ್ಲಿಡ್ತಾರೆ. ಆದ್ರೆ ವಾಸ್ತುವಿನ ಬಗ್ಗೆ ಗಮನ ನೀಡುವುದಿಲ್ಲ. ಕಚೇರಿಯಲ್ಲಿ ಕುರ್ಚಿ ಇಡುವ ದಿಕ್ಕು ಹಾಗೂ ಕುರ್ಚಿ ಬಣ್ಣ ಅಶುಭ ಫಲಗಳನ್ನು ನೀಡುತ್ತದೆ. ಹಾಗಾಗಿ ಕುರ್ಚಿ ಬಣ್ಣದ ಬಗ್ಗೆಯೂ ಹೆಚ್ಚು ಗಮನ ನೀಡಲಾಗುತ್ತದೆ.
ಕಬ್ಬಿಣ ಕುರ್ಚಿಯಲ್ಲಿ ಕುಳಿತು ಕೆಲಸ ಮಾಡಿದ್ರೆ ಕೆಲಸ ಮಂದಗತಿಯಲ್ಲಿ ಸಾಗುತ್ತದೆಯಂತೆ. ಹಾಗಾಗಿ ಕಚೇರಿಯಲ್ಲಿ ಕಬ್ಬಿಣದ ಕುರ್ಚಿ ಬಳಸಬಾರದು. ಹಳದಿ ಬಣ್ಣದ ಕುರ್ಚಿಯನ್ನು ಹೆಚ್ಚು ಬಳಕೆ ಮಾಡಿ. ಇದು ಉದ್ಯೋಗದಲ್ಲಿ ಬರುವ ಅಡೆತಡೆಯನ್ನು ನಿವಾರಿಸುತ್ತದೆ. ಬಿಳಿ ಬಣ್ಣದ ಕುರ್ಚಿ ಕೆಲಸದ ಸ್ಥಳದಲ್ಲಿ ಕಾಡುವ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅಲ್ಯುಮಿನಿಯಂ ಕುರ್ಚಿ ವ್ಯಕ್ತಿಯ ನಷ್ಟಕ್ಕೆ ಕಾರಣವಾಗುತ್ತದೆ. ಕಪ್ಪು ಬಣ್ಣದ ಕುರ್ಚಿ ಬಳಕೆಯಿಂದೆ ಕಚೇರಿಯಲ್ಲಿ ದುರದೃಷ್ಟಕರ ಘಟನೆಗಳು ನಡೆಯುತ್ತವೆ. ನೀಲಿ ಬಣ್ಣದ ಕುರ್ಚಿಯಲ್ಲಿ ಕುಳಿತುಕೊಳ್ಳುವುದ್ರಿಂದ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ. ಹಸಿರು ಬಣ್ಣದ ಕುರ್ಚಿ ಕಚೇರಿಗೆ ಅತ್ಯುತ್ತಮ. ಇದ್ರ ಮೇಲೆ ಕುಳಿತು ಕೆಲಸ ಮಾಡಿದ್ರೆ ವ್ಯಾಪಾರದಲ್ಲಿ ವೃದ್ಧಿಯಾಗುತ್ತದೆ.