ಹಿಂದೂ ಧರ್ಮದಲ್ಲಿ ತುಳಸಿ ಗಿಡಗಳಿಗೆ ತುಂಬಾನೆ ಮಹತ್ವವಿದೆ. ಸಾಮಾನ್ಯವಾಗಿ ಎಲ್ಲಾ ಹಿಂದೂಗಳ ಮನೆಯ ಮುಂದೆ ತುಳಸಿಕಟ್ಟೆ ಇದ್ದೇ ಇರುತ್ತದೆ. ತುಳಸಿ ಗಿಡಗಳಿಗೆ ದೈವಿಕ ಶಕ್ತಿಯ ಜೊತೆಗೆ ಆರ್ಯುವೇದ ಶಕ್ತಿ ಕೂಡ ಇದೆ.
ತುಳಸಿ ಗಿಡಕ್ಕೆ ಪ್ರತಿನಿತ್ಯ ಮುತ್ತೈದೆಯರು ಸ್ನಾನ ಮಾಡಿದ ಬಳಿಕ ನೀರೆರೆಯುತ್ತಾರೆ. ಆದರೆ ಕೆಲವು ವಿಶೇಷ ದಿನಗಳಲ್ಲಿ ನೀವು ತುಳಸಿ ಗಿಡಕ್ಕೆ ನೀರೆರೆಯಬಾರದು.
ವಾಸ್ತು ಶಾಸ್ತ್ರದ ಪ್ರಕಾರ ಪ್ರತಿ ಭಾನುವಾರ, ಏಕಾದಶಿ ಹಾಗೂ ಚಂದ್ರಗ್ರಹಣದಂದು ನಾವು ತುಳಸಿಗಿಡಕ್ಕೆ ನೀರೆರೆಯೋದು ಸೂಕ್ತವಲ್ಲ ಎಂದು ಹೇಳಲಾಗುತ್ತದೆ. ಈ ದಿನವೂ ತುಳಸಿಗೆ ನೀರೆರದರೆ ಮನೆಗೆ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಯಾವ ಮನೆಯಲ್ಲಿ ಪ್ರತಿ ಗುರುವಾರ ತುಳಸಿ ಗಿಡಕ್ಕೆ ಹಸಿ ಹಾಲನ್ನು ಹಾಕಿ ಭಾನುವಾರ ಹೊರತು ಪಡಿಸಿ ಪ್ರತಿ ದಿನ ತುಪ್ಪದ ದೀಪವನ್ನು ಬೆಳಗುತ್ತಾರೋ ಅಂತಹ ಮನೆಯಲ್ಲಿ ಸುಖ ಶಾಂತಿ ನೆಲೆಸಲಿದೆ. ಅಲ್ಲದೇ ಮನೆಯಲ್ಲಿ ಒಣಗಿದ ತುಳಸಿ ಗಿಡವನ್ನ ಇಡಬಾರದು. ಇದು ಕೂಡ ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಶೋಭೆಯಲ್ಲ.