ಸುಂದರ ಮನೆ ಪ್ರತಿಯೊಬ್ಬರ ಕನಸು. ಮನೆ ಕಟ್ಟುವ ಭರದಲ್ಲಿ ಅನೇಕರು ವಾಸ್ತು ಶಾಸ್ತ್ರವನ್ನು ಮರೆತು ಬಿಡ್ತಾರೆ. ನಾವು ಮಾಡುವ ತಪ್ಪುಗಳಿಂದ ಜೀವನಪೂರ್ತಿ ತೊಂದರೆ ಅನುಭವಿಸಬೇಕಾಗುತ್ತದೆ. ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡಲ್ಲಿ ಆರ್ಥಿಕ ವೃದ್ಧಿ ಜೊತೆಗೆ ಸುಖ-ಶಾಂತಿಯನ್ನು ಕಂಡುಕೊಳ್ಳಬಹುದಾಗಿದೆ.
ಅನೇಕರು ಮನೆಯ ಎಲ್ಲ ಜಾಗಗಳಲ್ಲಿಯೂ ಹಣವನ್ನಿಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಇದು ತಪ್ಪು. ಯಾವಾಗ್ಲೂ ಬೀರುವಿನಲ್ಲಿಯೇ ಹಣವಿಡಬೇಕು. ಯಾವಾಗ್ಲೂ ದಕ್ಷಿಣ-ಪಶ್ಚಿಮ ಗೋಡೆಗೆ ಬೀರು ಇರಬೇಕು. ಅಂದ್ರೆ ಬೀರುವಿನ ಬಾಗಿಲು ಉತ್ತರಕ್ಕೆ ತೆರೆದುಕೊಳ್ಳುವಂತಿರಬೇಕು. ಉತ್ತರ ದಿಕ್ಕು ಕುಬೇರನ ಸ್ಥಾನ.
ಮನೆಯಲ್ಲಿರುವ ನಲ್ಲಿಯಲ್ಲಿ ನೀರು ತೊಟ್ಟಿಕ್ಕದಂತೆ ನೋಡಿಕೊಳ್ಳಿ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ನಲ್ಲಿಯಲ್ಲಿ ನೀರು ತೊಟ್ಟಿಕ್ಕುತ್ತಿದ್ದರೆ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿನಲ್ಲಿ ಎಂದೂ ಮೆಟ್ಟಿಲುಗಳಿರಬಾರದು. ಉತ್ತರ ದಿಕ್ಕು ಸ್ವಚ್ಛ ಹಾಗೂ ಶುದ್ಧವಾಗಿರಬೇಕು. ಈ ದಿಕ್ಕಿನಲ್ಲಿ ಮೆಟ್ಟಿಲುಗಳಿದ್ದರೆ ಮನೆಯಲ್ಲಿ ಎಂದೂ ಸುಖ-ಶಾಂತಿ ನೆಲೆಸುವುದಿಲ್ಲ.
ಮನೆಯ ಎಲ್ಲ ಜಾಗಗಳೂ ಸದಾ ಸ್ವಚ್ಛವಾಗಿರಬೇಕು. ಮನೆಯಲ್ಲಿ ಅದ್ರಲ್ಲೂ ಮೆಟ್ಟಿಲಿನ ಅಡಿಯಲ್ಲಿ ಹಾಳಾದ ವಸ್ತು ಹಾಗೂ ಹರಿದ ಬಟ್ಟೆಗಳನ್ನು ಸಂಗ್ರಹಿಸಿ ಇಡಬಾರದು. ಏಕೆಂದ್ರೆ ಸ್ವಚ್ಛವಾಗಿರುವ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುತ್ತಾಳೆ.
ಮನೆಯ ಮುಖ್ಯ ದ್ವಾರದ ಬಗ್ಗೆ ಹೆಚ್ಚಿನ ಗಮನ ನೀಡಬೇಕು. ದ್ವಾರ ವಾಸ್ತು ಪ್ರಕಾರದಂತಿರಲಿ. ಹಾಗೆ ಮುಖ್ಯ ದ್ವಾರವನ್ನು ಸದಾ ಸ್ವಚ್ಛವಾಗಿಡಿ. ರಂಗೋಲಿ ಹಾಕಿ ಸುಂದರವಾಗಿ ಅಲಂಕರಿಸಿ.