ಇತ್ತೀಚಿನ ದಿನಗಳಲ್ಲಿ ಆಧುನಿಕವಾಗಿ ಮನೆಗಳನ್ನು ನಿರ್ಮಾಣ ಮಾಡಲಾಗ್ತಾ ಇದೆ. ಅಡುಗೆ ಮನೆ ಕೂಡ ಇದಕ್ಕೆ ಹೊರತಾಗಿಲ್ಲ. ಸಣ್ಣ ಜಾಗದಲ್ಲಿ ಸಾಕಷ್ಟು ಸಾಮಗ್ರಿಗಳನ್ನು ಸ್ವಚ್ಛವಾಗಿಡುವ ಪ್ರಯತ್ನ ಮಾಡರ್ನ್ ಕಿಚನ್. ಆದ್ರೆ ಆಧುನಿಕತೆ ಹೆಸರಿನಲ್ಲಿ ವಾಸ್ತು ಶಾಸ್ತ್ರಗಳನ್ನು ಮರೆಯಲಾಗ್ತಾ ಇದೆ. ಅಡುಗೆ ಮನೆ ವಿಚಾರದಲ್ಲಿ ಮಾಡುವ ಸಣ್ಣ ತಪ್ಪುಗಳು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿ ವಾಸ್ತು ದೋಷವಾಗದಂತೆ ನೋಡಿಕೊಳ್ಳುವುದು ಒಳಿತು.
ಜಾಗ ಸಣ್ಣದಿರುವ ಕಾರಣ ಅಡುಗೆ ಮನೆಯ ಗೋಡೆಗಳಿಗೆ ಚಾಕುಗಳನ್ನು ನೇತು ಹಾಕಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಇದು ಅಶುಭ.
ಬಳಕೆಗೆ ಬರದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿಡಬೇಡಿ. ಇದು ಅಶುಭ. ಜೊತೆಗೆ ಸಣ್ಣ ಅಡುಗೆ ಮನೆಯಲ್ಲಿ ಪಾತ್ರೆಗಳ ರಾಶಿ ಸ್ವಚ್ಛತೆ, ಸೌಂದರ್ಯವನ್ನು ಹಾಳು ಮಾಡುತ್ತದೆ.
ಅಡುಗೆ ಮನೆ ಗೋಡೆಯ ಬಣ್ಣ ಬಿಳಿ ಬಣ್ಣವಾಗಿರಲಿ. ಸದಾ ಅಡುಗೆ ಮನೆಯನ್ನು ಸ್ವಚ್ಛವಾಗಿಡಿ.
ಅನೇಕರು ಪೊರಕೆಯನ್ನು ಅಡುಗೆ ಮನೆಯ ಆಸುಪಾಸು ಇಡ್ತಾರೆ. ಹಾಗೆ ಮಾಡಿದಲ್ಲಿ ಆಹಾರ ಸಮಸ್ಯೆ ಎದುರಾಗುತ್ತದೆ.
ಮುಖ್ಯ ಗೇಟ್ ಮುಂದೆಯೇ ಅಡುಗೆ ಮನೆಯನ್ನು ಕಟ್ಟಬೇಡಿ. ಹಾಗೆ ಅಡುಗೆ ಮನೆಯಲ್ಲಿ ಸಾಕಷ್ಟು ವಿದ್ಯುತ್ ಉಪಕರಣಗಳನ್ನು ಇಡಬೇಡಿ.
ಮೈಕ್ರೋವೇವ್ ಮನೆಯಲ್ಲಿದ್ದರೆ ಅಡುಗೆ ಮನೆಯ ಸರಿಯಾದ ದಿಕ್ಕಿನಲ್ಲಿ ಇದನ್ನು ಇಡಿ. ಮೆಕ್ರೋವೇವ್ ನೈರುತ್ಯ ದಿಕ್ಕಿನಲ್ಲಿಟ್ಟರೆ ಧನಾತ್ಮಕ ಶಕ್ತಿಯ ವೃದ್ಧಿಯಾಗುತ್ತದೆ. ಅಡುಗೆ ಮನೆ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿರಬೇಕು.
ಕೆಲಸ ಮಾಡದ ಸಮಯದಲ್ಲಿ ಅಡುಗೆ ಮನೆ ಬಾಗಿಲು ಹಾಕಿಡಿ. ಅಗತ್ಯವಿಲ್ಲದ ವೇಳೆ ಬಾಗಿಲು ತೆರೆದಿಡುವುದು ವಾಸ್ತು ಶಾಸ್ತ್ರದ ಪ್ರಕಾರ ಶುಭವಲ್ಲ.