ವಾಸ್ತು ಶಾಸ್ತ್ರವಿಲ್ಲದೆ ಹಿಂದೂ ಧರ್ಮ ಅಪೂರ್ಣವೆಂದೇ ಭಾವಿಸಲಾಗುತ್ತದೆ. ಮನೆಯಲ್ಲಿ ಎಲ್ಲವನ್ನೂ ವಾಸ್ತು ಶಾಸ್ತ್ರದ ಪ್ರಕಾರ ಜೋಡಿಸಿದರೆ ಧನಾತ್ಮಕ ಶಕ್ತಿ ನೆಲೆಸುತ್ತದೆ. ಪೊರಕೆಗೆ ಸಂಬಂಧಿಸಿದ ಅನೇಕ ನಿಯಮಗಳನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ.
ಹಿಂದೂ ಧರ್ಮದಲ್ಲಿ ಪೊರಕೆಯನ್ನು ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪೊರಕೆ ಇಡುವ ವಾಸ್ತು ನಿಯಮಗಳನ್ನು ಅನುಸರಿಸಿದರೆ ಮನೆಯು ಸಂಪತ್ತಿನಿಂದ ತುಂಬಿರುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಪೊರಕೆಯನ್ನು ಯಾವಾಗಲೂ ದಕ್ಷಿಣ ಮತ್ತು ಪಶ್ಚಿಮದ ನಡುವಿನ ದಿಕ್ಕಿನಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೊರಕೆಯನ್ನು ಎಂದಿಗೂ ನೇರವಾಗಿ ಇಡಬಾರದು. ಯಾವಾಗಲೂ ಪೊರಕೆಯನ್ನು ಮಲಗಿಸಿಡಿ. ಅಷ್ಟೇ ಅಲ್ಲ ಅಡುಗೆಮನೆಯಲ್ಲಿ ಪೊರಕೆಯನ್ನು ಇಡಬಾರದು. ವಾಸ್ತುವಿನ ಈ ನಿಯಮಗಳನ್ನು ಅನುಸರಿಸಿದರೆ ಲಕ್ಷ್ಮಿ ದೇವಿಯು ಸಂತೋಷ್ಠಳಾಗುತ್ತಾಳೆ. ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ.
ವಾಸ್ತು ಪ್ರಕಾರ ಮುರಿದ ಪೊರಕೆಯನ್ನು ಮನೆಯಲ್ಲಿ ಇಡಬಾರದು, ಅದು ಮನೆಯಲ್ಲಿ ಬಡತನವನ್ನು ತರುತ್ತದೆ. ಪೊರಕೆಯ ಮೇಲೆ ಎಂದಿಗೂ ಕಾಲಿಡಬೇಡಿ ಅಥವಾ ಕೊಳಕನ್ನು ಹಾಗೇ ಇಡಬೇಡಿ. ಅದನ್ನು ಸ್ವಚ್ಛಗೊಳಿಸಿ. ಸಂಜೆ ಕಸ ಗುಡಿಸುವುದು ಶ್ರೇಯಸ್ಕರವಲ್ಲ. ಹೀಗೆ ಮಾಡುವುದರಿಂದ ಲಕ್ಷ್ಮಿಯು ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ. ಯಾವಾಗಲೂ ಸೂರ್ಯೋದಯದ ನಂತರ ಮತ್ತು ಸೂರ್ಯಾಸ್ತದ ಸ್ವಲ್ಪ ಮೊದಲು ಮನೆಯನ್ನು ಗುಡಿಸಿ.
ಹೊಸ ಪೊರಕೆಯನ್ನು ಕೊಂಡುಕೊಳ್ಳಲು ಅಮವಾಸ್ಯೆಯ ದಿನ, ಮಂಗಳವಾರ, ಶನಿವಾರ ಮತ್ತು ಭಾನುವಾರ ಬಹಳ ಮಂಗಳಕರ. ಸೋಮವಾರ ಮತ್ತು ಶುಕ್ಲ ಪಕ್ಷದಲ್ಲಿ ಪೊರಕೆ ಖರೀದಿಸುವುದು ನಷ್ಟವನ್ನು ಉಂಟುಮಾಡುತ್ತದೆ. ಆ ದಿನ ಪೊರಕೆ ಖರೀದಿಸಿದರೆ ಕುಟುಂಬದ ಸದಸ್ಯರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.