ಮೃತ ಸಂಬಂಧಿಕರ ಆತ್ಮಕ್ಕೆ ಶಾಂತಿ ನೀಡಲು, ಪಿತೃ ಪಕ್ಷದಲ್ಲಿ ತರ್ಪಣ, ಶ್ರಾದ್ಧ ಮಾಡಲಾಗುತ್ತದೆ. ಆದ್ರೆ ಕೆಲ ಸಂಬಂಧಿಕರು ಅಥವಾ ಆಪ್ತರ ಸಾವಿನ ತಿಥಿ ತಿಳಿದಿರುವುದಿಲ್ಲ. ಅವರ ಶ್ರಾದ್ಧವನ್ನು ಯಾವಾಗ ಮಾಡಬೇಕೆಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಮಕ್ಕಳು, ಅವಿವಾಹಿತರು, ಅಕಾಲಿಕ ಮರಣ ಹೊಂದಿದ ಜನರ ತಿಥಿಯನ್ನು ಬೇರೆ ಬೇರೆ ದಿನದಂದು ಮಾಡಬೇಕು.
ಸತ್ತ ಮಕ್ಕಳ ಶ್ರಾದ್ಧದ ದಿನಾಂಕ : ಸತ್ತ ಮಗುವಿನ ಸಾವಿನ ದಿನಾಂಕ ತಿಳಿದಿಲ್ಲದಿದ್ದರೆ, ಅವರ ಶ್ರಾದ್ಧವನ್ನು ಪಿತೃ ಪಕ್ಷದ ತ್ರಯೋದಶಿಯಂದು ಮಾಡಬೇಕು.
ಸನ್ಯಾಸಿಯ ಶ್ರಾದ್ಧ : ಸನ್ಯಾಸಿಯ ಸಾವಿನ ದಿನಾಂಕ ತಿಳಿದಿಲ್ಲದಿದ್ದರೆ, ಪಿತೃ ಪಕ್ಷದ ಏಕಾದಶಿಯಂದು ಶ್ರಾದ್ಧ ಮಾಡಬೇಕು.
ಅಕಾಲಿಕವಾಗಿ ಮರಣ ಹೊಂದಿದವರ ಶ್ರಾದ್ಧ : ಆತ್ಮಹತ್ಯೆ ಅಥವಾ ಅಪಘಾತದಲ್ಲಿ ಮೃತಪಟ್ಟವರ ಸಾವಿನ ದಿನ ತಿಳಿದಿಲ್ಲವೆಂದ್ರೆ ಪಿತೃಪಕ್ಷದ ಚತುರ್ದಶಿ ದಿನ ಮಾಡಬೇಕು.
ಕುಟುಂಬದಲ್ಲಿ ಸಾವನ್ನಪ್ಪಿದ ಎಲ್ಲರ ಶ್ರಾದ್ಧವನ್ನು ಒಂದೇ ದಿನ ಮಾಡಲು ಬಯಸಿದ್ರೆ ಪಿತೃಪಕ್ಷದ ಅಮವಾಸ್ಯೆಯಂದು ಮಾಡಬೇಕು.