ಮದುವೆಯಾದ ಮೇಲೆ ಮಹಿಳೆಯರು ತಾವು ತೊಡುವ, ಧರಿಸುವ ವಸ್ತುಗಳ ಬಗ್ಗೆ ಹೆಚ್ಚು ಗಮನ ಕೊಡಬೇಕು. ಇಲ್ಲವಾದರೆ ಇದರಿಂದ ಅವರ ಪತಿಯ ಜೀವಕ್ಕೆ ಕುತ್ತು ಬರಬಹುದು, ಅವರಿಗೆ ದರಿದ್ರ ಆವರಿಸಬಹುದು. ಹಾಗಾಗಿ ಮದುವೆಯಾದ ಮಹಿಳೆಯರು ಅಪ್ಪಿತಪ್ಪಿಯೂ ಈ 2 ವಸ್ತುಗಳನ್ನು ಧರಿಸಬೇಡಿ.
ಮದುವೆಗೂ ಮುಂಚೆ ಮಹಿಳೆಯರು ಏನು ಬೇಕಾದರೂ ಧರಿಸಬಹುದು. ಆದರೆ ಮದುವೆಯಾದ ಮೇಲೆ ಅವರು ಧರಿಸುವ ವಸ್ತುಗಳು ಹೆಚ್ಚಾಗಿ ಅವರ ಪತಿಯ ಜೀವನದ ಮೇಲೆ ಪ್ರಭಾವ ಬೀರುವುದರಿಂದ ಅವರು ಅದರ ಕಡೆಗೆ ಗಮನ ಕೊಡಬೇಕು. ಇಲ್ಲವಾದರೆ ನಕರಾತ್ಮಕ ಶಕ್ತಿ ಅವರನ್ನು ಆವರಿಸಿ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಶಾಸ್ತ್ರದ ಪ್ರಕಾರ ಮದುವೆಯಾದ ಮಹಿಳೆಯರು ಬಿಳಿ ಬಟ್ಟೆಯನ್ನು ಧರಿಸಬಾರದು. ಇದನ್ನು ವಿಧವೆಯರು ಧರಿಸುವುದರಿಂದ ಅದು ನಿಮ್ಮ ಪತಿಯ ಜೀವಕ್ಕೆ ಕುತ್ತು ತರುತ್ತದೆ. ಹಾಗಾಗಿ ಬಿಳಿ ಜೊತೆಗೆ ಇತರ ಬಣ್ಣಗಳು ಮಿಶ್ರಿತ ಬಟ್ಟೆಗಳನ್ನು ಧರಿಸಬಹುದು. ಹಾಗೇ ಕಾಲಿಗೆ ಚಿನ್ನದ ಗೆಜ್ಜೆ ಹಾಕಬಾರದು. ಇದರಿಂದ ಕುಬೇರನಿಗೆ ಅವಮಾನ ಮಾಡಿದಂತಾಗಿ ಇದರಿಂದ ದರಿದ್ರ ಆವರಿಸುತ್ತದೆ.