ಬೆಂಗಳೂರು : ನನ್ನ ಪ್ರಕಾರ ಹಾಲಿನ ದರ ಇನ್ನೂ ಜಾಸ್ತಿ ಮಾಡಬೇಕಿತ್ತು , ವಿರೋಧ ಮಾಡುವವರು ಮಾಡಲಿ ಎಂದು ಹಾಲಿನ ಬೆಲೆ ಏರಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ.
ಹಾಲಿನ ದರ ಏರಿಕೆಗೆ ಬಿಜೆಪಿ ಟೀಕಿಸಿದ್ದು, ಈ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಸಮರ್ಥನೆ ನೀಡಿದ್ದಾರೆ. ಹಾಲಿನ 2 ರೂ ಹಣ ರೈತರಿಗೆ ಹೋಗುತ್ತದೆ, ಇದನ್ನು ವಿರೋಧಿಸಿ ಬಿಜೆಪಿಯವರು ರೈತ ವಿರೋಧಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದರು.
ಏರಿಕೆ ಮಾಡಿದ ಹಣ ರೈತರಿಗೆ ಹೋಗುತ್ತದೆ. ಕೆಎಂಎಫ್ ಉಳಿಬೇಕು. ಕೆಎಂಎಫ್ ಅಂದರೆ ರೈತರ ಒಕ್ಕೂಟ. ರೈತರೇ ಅಲ್ಲಿ ಇರೋದು. ನನ್ನ ಪ್ರಕಾರ ಇನ್ನು ಬೆಲೆ ಏರಿಕೆ ಜಾಸ್ತಿ ಮಾಡಬೇಕಿತ್ತು. ಯಾರು ಬೇಕಾದ್ರು ವಿವಾದ ಮಾಡಲಿ, ಯಾರು ಬೇಕಾದ್ರು ಬೈಯಲಿ. ವಿರೋಧ ಮಾಡೋರು ಮಾಡಲಿ. ನನ್ನ ಪ್ರಕಾರ ಹಾಲಿನ ದರ ಇನ್ನೂ ಜಾಸ್ತಿ ಮಾಡಬೇಕಿತ್ತು , ವಿರೋಧ ಮಾಡುವವರು ಮಾಡಲಿ. ರೈತರು ಪಡುತ್ತಿರುವ ಸಂಕಷ್ಟದ ಬಗ್ಗೆ ಅವರಿಗೆ ಅರಿವಿಲ್ಲ. ಬಿಜೆಪಿಯವರು ರೈತ ವಿರೋಧಿಗಳು ಎಂದು ಕಿಡಿಕಾರಿದ್ದಾರೆ.