ಮನೆಯ ಮುಂದೆ ತುಳಸಿ ಗಿಡವಿದ್ದರೆ ಆ ಮನೆಗೆ ಶೋಭೆ. ಹಸಿರಾಗಿರುವ ತುಳಸಿ ಗಿಡ ಮನೆಯ ಸಮೃದ್ಧಿಯ ಸಂಕೇತ. ಮನೆಯಲ್ಲಿ ಅಶುಭ ನಡೆಯುತ್ತೆ ಎನ್ನುವ ಮುನ್ಸೂಚನೆಯನ್ನೂ ಮನೆಯಲ್ಲಿರುವ ತುಳಸಿ ನೀಡುತ್ತದೆ.
ನೀವು ಎಷ್ಟೇ ಪೋಷಣೆ ಮಾಡಿದ್ರೂ ಕೆಲವೊಮ್ಮೆ ತುಳಸಿ ಗಿಡ ಮಾತ್ರ ಚಿಗುರುವುದಿಲ್ಲ. ನಿಧಾನವಾಗಿ ಬಾಡುತ್ತ ಬರುತ್ತದೆ. ಇದು ಏನೋ ಕೆಟ್ಟದ್ದಾಗುತ್ತದೆ ಎಂಬುದರ ಮುನ್ಸೂಚನೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಗೆ ಕೆಟ್ಟದಾಗುವ ಮುನ್ನ ಲಕ್ಷ್ಮಿ ಅಂದ್ರೆ ತುಳಸಿ ಮನೆಯಿಂದ ಹೊರಹೋಗಿರ್ತಾಳೆ. ಎಲ್ಲಿ ಬಡತನ, ದಾರಿದ್ರ್ಯವಿರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಮನೆಯಲ್ಲಿರುವ ತುಳಸಿಗೆ ವಾಸ್ತುದೋಷವನ್ನು ನಿವಾರಿಸುವ ಶಕ್ತಿ ಇದೆ. ಹುಟ್ಟಿದಾಗಿನಿಂದ ಸಾಯುವವರೆಗೂ ತುಳಸಿ ಸಹಾಯಕ್ಕೆ ಬರುತ್ತದೆ. ನಮ್ಮ ಕುಟುಂಬದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಅಡುಗೆ ಮನೆಯ ಬಳಿ ತುಳಸಿ ಗಿಡವಿರುವುದರಿಂದ ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಪೂರ್ವದಿಕ್ಕಿನ ಕಿಟಕಿ ಬಳಿ ತುಳಸಿ ಗಿಡವಿಟ್ಟರೆ ಮಗನ ಹಠಮಾರಿತನ ದೂರವಾಗುತ್ತದೆ.
ಕನ್ಯೆಯರು ತುಳಸಿ ಗಿಡಕ್ಕೆ ಪ್ರತಿದಿನ ನೀರು ಹಾಕಿ, ಒಂದು ಪ್ರದಕ್ಷಿಣೆ ಹಾಕುವುದರಿಂದ ಬೇಗ ಮದುವೆಯಾಗುತ್ತದೆ. ಒಳ್ಳೆ ವರ ಸಿಗ್ತಾನೆಂಬ ನಂಬಿಕೆ ಇದೆ.
ವ್ಯಾಪಾರದಲ್ಲಿ ಹಿನ್ನಡೆಯಾಗ್ತಿದ್ದರೆ ನೈರುತ್ಯ ಭಾಗದಲ್ಲಿ ತುಳಸಿ ಸಸಿಯನ್ನು ನೆಟ್ಟು ಪ್ರತಿ ಶುಕ್ರವಾರ ಪೂಜೆ ಮಾಡಬೇಕು. ಹಸಿ ಹಾಲನ್ನು ತುಳಸಿಗೆ ಅರ್ಪಿಸಿ, ಮಿಠಾಯಿಯ ನೈವೇದ್ಯ ಮಾಡಬೇಕು. ಜೊತೆಗೆ ಸುಮಂಗಲಿಗೆ ಸಿಹಿಯನ್ನು ನೀಡಬೇಕು.