ತಡವಾಗಿ ನೀವು ನಿದ್ರೆ ಮಾಡ್ತೀರಾ? ಇತರರಿಗೆ ಹೋಲಿಕೆ ಮಾಡಿದ್ರೆ ಹೆಚ್ಚು ಕೆಟ್ಟ ಶಬ್ಧಗಳ ಬಳಕೆ ಮಾಡ್ತೀರಾ? ಅಕ್ಕಪಕ್ಕದ ಜನರ ಕಣ್ಣಲ್ಲಿ ಕೆಟ್ಟವರಾಗಿದ್ದೀರಾ? ತಡವಾಗಿ ನಿದ್ರೆ ಮಾಡುವ ಹಾಗೂ ಕೆಟ್ಟ ಶಬ್ಧ ಬಳಸುವವರ ಬಗ್ಗೆ ಸಂಶೋಧನೆಯೊಂದು ಆಶ್ಚರ್ಯಕಾರಿ ಸಂಗತಿ ಹೊರ ಹಾಕಿದೆ. ಸಂಶೋಧನೆ ಪ್ರಕಾರ ಇಂಥ ಮಾತನಾಡುವವರು ಪ್ರಾಮಾಣಿಕ ಹಾಗೂ ಹೆಚ್ಚು ಬುದ್ದಿವಂತರಾಗಿರುತ್ತಾರಂತೆ.
ಸಂಶೋಧನೆ ಪ್ರಕಾರ ಯಾರು ರಾತ್ರಿ ತುಂಬಾ ತಡವಾಗಿ ಮಲಗ್ತಾರೋ ಅವ್ರ ಬುದ್ಧಿ ಮಟ್ಟ ಹೆಚ್ಚಿರುತ್ತದೆಯಂತೆ. ಅವ್ರು ರಾತ್ರಿ ಹೆಚ್ಚು ಸಕ್ರಿಯವಾಗಿರುತ್ತಾರಂತೆ. ಯಾರ ಐಕ್ಯೂ 75 ಕ್ಕಿಂತ ಕಡಿಮೆ ಇರುತ್ತದೆಯೋ ಅವ್ರು ರಾತ್ರಿ 11.41 ರವರೆಗೆ ಎದ್ದಿರುತ್ತಾರೆ. ಐಕ್ಯೂ 123 ಕ್ಕಿಂತ ಹೆಚ್ಚಿದ್ದರೆ ಅವ್ರು 12.30 ರವರೆಗೆ ಎಚ್ಚರವಾಗಿರುತ್ತಾರೆಂದು ಸಂಶೋಧನೆ ಹೇಳಿದೆ. ವಿಷಯಗಳು ಹಾಗೂ ಸಂದರ್ಭಗಳಿಗೆ ಇಂಥ ವ್ಯಕ್ತಿಗಳು ಬಹುಬೇಗ ಹೊಂದಿಕೊಳ್ಳುತ್ತಾರಂತೆ.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಉತ್ಸುಕರಾಗಿರುತ್ತಾರಂತೆ. ಅವ್ರು ಸಕಾರಾತ್ಮಕ ದೃಷ್ಟಿಕೋನ ಹೊಂದಿರುತ್ತಾರೆ. ಎಲ್ಲ ಸಮಸ್ಯೆಗೆ ಸಕಾರಾತ್ಮಕ ಪರಿಹಾರ ಹುಡುಕುತ್ತಾರೆ. ತಪ್ಪಿನಿಂದ ಅವ್ರು ಹೆಚ್ಚು ಕಲಿಯುತ್ತಾರೆಂದು ಸಂಶೋಧನೆ ಹೇಳಿದೆ.