ಡಿಜಿಟಲ್ ಡೆಸ್ಕ್ : ಕಾರ್ತಿ ಮತ್ತು ನಿರ್ದೇಶಕ ಪಿಎಸ್ ಮಿತ್ರನ್ ಅವರ ‘ಸರ್ದಾರ್ 2’ ಚಿತ್ರದ ಶೂಟಿಂಗ್ ಸೆಟ್ ನಲ್ಲಿ 20 ಅಡಿಯಿಂದ ಬಿದ್ದು ‘ಸ್ಟಂಟ್ ಮ್ಯಾನ್’ ಮೃತಪಟ್ಟಿದ್ದಾರೆ.
ಎಲುಮಲೈ ಎಂಬ ಸ್ಟಂಟ್ ಮ್ಯಾನ್ ಸಾವನ್ನಪ್ಪಿದ್ದಾರೆ. ಚಿತ್ರದ ಆಕ್ಷನ್ ಸನ್ನಿವೇಶವನ್ನು ಚಿತ್ರೀಕರಿಸುವಾಗ ಎಲುಮಲೈ 20 ಅಡಿ ಎತ್ತರದಿಂದ ಬಿದ್ದಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
‘ಸರ್ದಾರ್ 2’ ಚಿತ್ರದ ಚಿತ್ರೀಕರಣ ಜುಲೈ 15 ರಂದು ಚೆನ್ನೈನ ಸಾಲಿಗ್ರಾಮಂನ ಎಲ್ವಿ ಪ್ರಸಾದ್ ಸ್ಟುಡಿಯೋದಲ್ಲಿ ಪ್ರಾರಂಭವಾಯಿತು. ಅಪಘಾತದ ಬಗ್ಗೆ ವಿರುಗಂಬಕ್ಕಂ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.
ಮೂಲಗಳ ಪ್ರಕಾರ, 54 ವರ್ಷದ ಎಲುಮಲೈ ಅವರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಇಂದು ಬೆಳಿಗ್ಗೆ ೧೧.೩೦ ರ ಸುಮಾರಿಗೆ ನಿಧನರಾದರು . ಅಪಘಾತದ ನಂತರ ‘ಸರ್ದಾರ್ ೨’ ಚಿತ್ರೀಕರಣ ಸ್ಥಗಿತಗೊಂಡಿತು. ಜುಲೈ 16 ರ ಮಂಗಳವಾರ ಸಂಜೆ, ಸ್ಟಂಟ್ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದ ವೇಳೆ ಶ್ರೀ ಎಲುಮಲೈ ಆಕಸ್ಮಿಕವಾಗಿ 20 ಅಡಿ ಎತ್ತರದ ರೋಸ್ಟ್ರಮ್ ನಿಂದ ಬಿದ್ದು ಗಾಯಗೊಂಡಿದ್ದರು.