
ಒಡಿಶಾದ ಕೋರಾಪುಟ್ ಜಿಲ್ಲೆಯ ಕೊಟ್ ಪುಟ್ ನಲ್ಲಿ ವ್ಯಾನ್ ಪಲ್ಟಿಯಾಗಿ 9 ಜನ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 13 ಮಂದಿ ಗಾಯಗೊಂಡಿದ್ದಾರೆ.
ಒಡಿಶಾದ ಸಿಂಧಿಗುಡ ಗ್ರಾಮದಿಂದ ಛತ್ತೀಸ್ಗಡದ ಕುಲ್ತಾ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊರಾಪುಟ್ ಪೊಲೀಸ್ ಅಧಿಕಾರಿ ಮಧುಸೂದನ್ ಮಿಶ್ರಾ ತಿಳಿಸಿದ್ದಾರೆ.