
ಕಲಬುರಗಿ: ಬೈಕ್, ಗೂಡ್ಸ್ ಆಟೋ ಮಧ್ಯ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಅಳ್ಳಗಿ ಕ್ರಾಸ್ ಬಳಿ ಘಟನೆ ನಡೆದಿದೆ. ಸವಾರ ಶಿವಕುಮಾರ್(19), ಗೂಡ್ಸ್ ಆಟೋದಲ್ಲಿದ್ದ ಹಸನ್ ಸಾಬ್(70) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಬೈಕ್ ಗೆ ಡಿಕ್ಕಿ ಆದ ನಂತರ ಗೂಡ್ಸ್ ಆಟೋ ಪಲ್ಟಿಯಾಗಿದ್ದು, ಗೂಡ್ಸ್ ಆಟೋದಲ್ಲಿದ್ದ ತೊಗರಿ ಚೀಲ ಮೇಲೆ ಬಿದ್ದು ಹಸನ ಸಾಬ್ ಸಾವನ್ನಪ್ಪಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.