![](https://kannadadunia.com/wp-content/uploads/2022/03/Road-accident-2.jpg)
ತುಮಕೂರು: ಸ್ಥಳೀಯ ಪ್ರವಾಸಿ ತಾಣಕ್ಕೆ ತೆರಳಿ ವಾಪಸ್ ಬರುವಾಗ ಟಾಟಾ ಏಸ್ ವಾಹನ ಪಲ್ಟಿಯಾಗಿ ಶಾಲಾ ಮಕ್ಕಳು ಗಾಯಗೊಂಡ ಘಟನೆ ಗೌಡನಕುಂಟೆಯ ಬಳಿ ನಡೆದಿದೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌಡನಕುಂಟೆಯ ಬಳಿ ಅಪಘಾತ ಸಂಭವಿಸಿದೆ. ಕೊರಟಗೆರೆ ತಾಲೂಕು ಚಿಂಪುಗಾನಹಳ್ಳಿ ಶಾಲೆಯ ಮಕ್ಕಳು ಗಾಯಗೊಂಡಿದ್ದಾರೆ. ಟಾಟಾ ಏಸ್ ನಲ್ಲಿ ಶಿಕ್ಷಕ ಕೃಷ್ಣಮೂರ್ತಿ 35 ವಿದ್ಯಾರ್ಥಿಗಳನ್ನು ತುಂಬಿದ್ದ.
ಅಲ್ಲದೇ ಶಿಕ್ಷಕ ಕೃಷ್ಣಮೂರ್ತಿಯೇ ಚಾಲನೆ ಮಾಡುತ್ತಿದ್ದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅಪಘಾತದಲ್ಲಿ 15 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಗೊಂಡ ಮಕ್ಕಳನ್ನು ಕೊರಟಗೆರೆ ಮತ್ತು ತುಮಕೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.