ಭೋಪಾಲ್: ಮತ್ತೊಂದು ಭೀಕರ ಬಸ್ ಅಪಘಾತ ಸಂಭವಿಸಿದ್ದು, ನರ್ಮದಾ ನದಿಗೆ ಮಹಾರಾಷ್ಟ್ರದ ಸರ್ಕಾರಿ ರಸ್ತೆ ಸಾರಿಗೆ ನಿಗಮದ ಬಸ್ ಉರುಳಿಬಿದ್ದ ಪರಿಣಾಮ 13 ಪ್ರಯಾಣಿಕರು ಸಾವನ್ನಪ್ಪಿದ್ದು, 27 ಜನರು ನಾಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಧರ್ ಜಿಲ್ಲೆಯಲ್ಲಿ ನಡೆದಿದೆ.
ಪುಣೆಯಿಂದ ಆಗಮಿಸಿದ್ದ ಬಸ್ ಧರ್ ಜಿಲ್ಲೆಯಲ್ಲಿ ನರ್ಮದಾ ನದಿಯ ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ನದಿಗೆ ಉರುಳಿದೆ. ಭಾರಿ ಮಳೆಯಿಂದಾಗಿ ನರ್ಮದಾ ನದಿಯಲ್ಲಿ ಪ್ರವಾಹದ ಹರಿವು ಹೆಚ್ಚಿದ್ದು, ನೀರಿನ ರಭಸಕ್ಕೆ ಬಸ್ ನಲ್ಲಿದ್ದ ಹಲವರು ಕೊಚ್ಚಿ ಹೋಗಿದ್ದಾರೆ.
ಸಧ್ಯದ ಮಾಹಿತಿ ಪ್ರಕಾರ 13 ಪ್ರಯಾಣಿಕರು ಮೃತಪಟ್ಟಿದ್ದು, 25 ಜನರು ನಾಪತ್ತೆಯಾಗಿದ್ದಾರೆ. 15 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಧಮ್ ನೊದ್ ಪೊಲೀಸ್ ಠಾಣೆ ಸಿಬ್ಬಂದಿ ತಿಳಿಸಿದ್ದಾರೆ.