ಆಂಧ್ರಪ್ರದೇಶ : ಬನ್ನಿ ಹಬ್ಬದ ಸಂದರ್ಭದಲ್ಲಿ ಕೋಲು ಕಾಳಗದಲ್ಲಿ ಮೂವರು ಮೃತಪಟ್ಟು, ಸುಮಾರು 40 ಜನರು ಗಾಯಗೊಂಡ ಘಟನೆ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ನಡೆದ ಉತ್ಸವದ ಬಗ್ಗೆ ಮಾತನಾಡಿದ ಅಧಿಕಾರಿ, ಬೆಂಕಿಯ ಟಾರ್ಚ್ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಮರದ ಕೊಂಬೆಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
“ಯಾರೋ ಉದ್ದೇಶಪೂರ್ವಕವಾಗಿ ಮರದ ಕಡೆಗೆ ಬೆಂಕಿಯ ಟಾರ್ಚ್ ಎಸೆದಿದ್ದರಿಂದ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಅವರು ಕೆಳಗೆ ಬಿದ್ದಿದ್ದಾರೆ” ಎಂದು ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿ ಕೃಷ್ಣಕಾಂತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬನ್ನಿ ಉತ್ಸವವನ್ನು ನೋಡಲು ಹಲವಾರು ಜನರು ಮರದ ಕೊಂಬೆಗಳ ಮೇಲೆ ಹತ್ತಿದ್ದರು ಎಂದು ಅವರು ಹೇಳಿದರು.ಅಲ್ಲದೆ, ಹಬ್ಬದ ಭಾಗವಾಗಿರುವ ಕೋಲು ಕಾಳಗದ ಸಮಯದಲ್ಲಿ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ..