
ಬೆಂಗಳೂರು: ಕಾರ್ ಮೇಲೆ ಟಿಪ್ಪರ್ ಬಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಅತ್ತಿಬೆಲೆ ಟೋಲ್ ಸಮೀಪ ನಡೆದಿದೆ.
ಕಾರ್ ಚಾಲಕ ಮತ್ತು ಕಾರ್ ನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿದ ಟಿಪ್ಪರ್ ಕಾರ್ ಮೇಲೆ ಬಿದ್ದು ಅವಘಢ ಸಂಭವಿಸಿದೆ. ಸ್ಥಳಕ್ಕೆ ಅತ್ತಿಬೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.