
ಬೆಂಗಳೂರು: ಬೆಂಗಳೂರಿನ ರಾಜಾಜಿನಗರದಲ್ಲಿ ತಡರಾತ್ರಿ 12.30 ರ ವೇಳೆಗೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ರಮೇಶ್(39) ಮೃತಪಟ್ಟಿದ್ದಾರೆ, ಮೃತ ರಮೇಶ್ ಸ್ನೇಹಿತರು ಆಕ್ರೋಶಗೊಂಡು ಬಸ್ ಗೆ ಕಲ್ಲು ತೂರಿ ಚಾಲಕ ಮತ್ತು ನಿರ್ವಾಹಕರನ್ನು ಥಳಿಸಿದ್ದಾರೆ.
ಬೈಕ್ ಸವಾರನ ವಿರುದ್ಧ ಡ್ರಂಕ್ ಅಂಡ್ ಡ್ರೈವ್ ಆರೋಪ ಮಾಡಲಾಗಿದೆ. ಬಸ್ ಚಾಲಕ ಈ ಕುರಿತು ರಾಜಾಜಿನಗರ ಠಾಣೆಗೆ ದೂರು ನೀಡಿದ್ದಾರೆ. ಬಸ್ ಚಾಲಕನ ಅತಿವೇಗ, ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಮೃತನ ಸ್ನೇಹಿತರು ಆರೋಪಿಸಿದ್ದಾರೆ.