
ಕಲಬುರಗಿ: ಫಾರ್ಚೂನರ್ ಕಾರ್ ಡಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ ಘಟನೆ ಕಲಬುರಗಿ ತಾಲೂಕಿನ ಕೂಡಿ ಕ್ರಾಸ್ ಸಮೀಪ ನಡೆದಿದೆ.
69 ವರ್ಷದ ಶಿವಶರಣಪ್ಪ ಮತ್ತು 50 ವರ್ಷದ ಗುಂಡಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋನಾ ಹಿಪ್ಪರಗಾ ಗ್ರಾಮದ ನಿವಾಸಿಗಳಾಗಿದ್ದಾರೆ. ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ವೇಳೆಯಲ್ಲಿ ಕಾರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ದಂಪತಿಗೆ ಡಿಕ್ಕಿ ಹೊಡೆದ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾಗಿದೆ. ಕಾರ್ ನಲ್ಲಿ ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಯಲಗೋಡ ಮಠದ ಗುರುಲಿಂಗ ಶ್ರೀಗಳು ಪ್ರಯಾಣಿಸುತ್ತಿದ್ದರು. ಫಾರ್ಚೂನರ್ ಕಾರ್ ನಲ್ಲಿದ್ದ ಶ್ರೀಗಳು ಹಾಗೂ ಚಾಲಕನಿಗೆ ಗಾಯಗಳಾಗಿದ್ದು, ಕಲಬುರ್ಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರ್ಗಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.