
ಕಲಬುರಗಿ: ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರ್ಗಿ ಹೊರವಲಯದ ಶೆಟ್ಟಿ ಕಾಲೇಜು ಬಳಿ ಅಪಘಾತ ಸಂಭವಿಸಿದೆ.
ಕಾರ್ ನಲ್ಲಿದ್ದ ಅಮೃತ್(21), ಆದರ್ಶ(22) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕಲಬುರ್ಗಿಯ ಕರುಣೆಶ್ವರ ಕಾಲೋನಿ ನಿವಾಸಿಗಳು ಎಂದು ಹೇಳಲಾಗಿದೆ. ಕಾರ್ ನಲ್ಲಿದ್ದ ಮತ್ತೊಬ್ಬರು ಗಾಯಗೊಂಡಿದ್ದು, ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲಬುರ್ಗಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.